ಕ್ರೀಡೆ ಸುದ್ದಿ

ಇಂದು ಭಾರತ ಮತ್ತು ಜಿಂಬಾಂಬೆ ನಡುವಿನ ಮೂರನೇ ಟಿ 20 ಪಂದ್ಯ

Share It

ಹರಾರೆ (ಜಿಂಬಾಂಬೆ) : ಭಾರತ ಮತ್ತು ಜಿಂಬಾಂಬೆ ನಡುವಿನ ಐದು ಟಿ 20 ಪಂದ್ಯ ಗಳ ಸರಣಿಯ ಮೂರನೇ ಪಂದ್ಯ ಇಂದು ನಡೆಯಲಿದೆ.

ಈಗಾಗಲೇ ಎರಡು ಪಂದ್ಯಗಳನ್ನು ಆಡಿರುವ ತಂಡಗಳು 1-1 ಅಂತರದಲ್ಲಿ ಸಮಬಲ ಸಾಧಿಸಿಕೊಂಡಿವೆ. ಮೊದಲ ಪಂದ್ಯದಲ್ಲಿ ಜಿಂಬಾಂಬೆ ಟೀಮ್ ಇಂಡಿಯಾವನ್ನು 102 ರನ್ ಗಳಿಗೆ ಕಟ್ಟಿ ಹಾಕುವ ಮೂಲಕ 13 ರನ್ ಗಳ ಅಂತರದಿಂದ ಜಯಶಾಲಿಯಾಗಿತ್ತು.

ಇನ್ನೂ ಎರಡನೇ ಪಂದ್ಯದಲ್ಲಿ ಅಭಿಷೇಕ್ ಶರ್ಮಾರ ಭರ್ಜರಿ ಶತಕದ ನೆರವಿನಿಂದ ಟೀಮ್ ಇಂಡಿಯಾ ಜಿಂಬಾಂಬೆಯ ವಿರುದ್ಧ ಬರೋಬ್ಬರಿ 100 ರನ್ ಗಳ ಅಂತರದಿಂದ ಗೆದ್ದು ಬೀಗಿತ್ತು. ಕಳೆದ ಮ್ಯಾಚ್ ನಲ್ಲಿ ಯುವ ಆಟಗಾರ ಸಾಯಿ ಸುದರ್ಶನ್ ಗೆ ಹನ್ನೊಂದರ ಬಳಗದಲ್ಲಿ ಆಡಲು ಅವಕಾಶ ಸಿಕ್ಕಿತ್ತು. ಆದರೆ ಬ್ಯಾಟಿಂಗ್ ಆಡಲು ಅವಕಾಶ ಸಿಕ್ಕಿರಲಿಲ್ಲ. ಇಂದು ಅವರು ಭಾರತದ ಪರ ಬ್ಯಾಟ್ ಬೀಸುವ ನಿರೀಕ್ಷೆಯಲ್ಲಿದ್ದಾರೆ.

ಎಂದಿನಂತೆ ಈ ಪಂದ್ಯವೂ ಕೂಡ ಜಿಂಬಾಂಬೆಯ ಹರಾರೆ ಸ್ಪೋರ್ಟ್ಸ್ ಕ್ಲಬ್ ಸ್ಟೇಡಿಯಂ ನಲ್ಲಿ ಸಂಜೆ 4:30ಕ್ಕೆ ಶುರುವಾಗಲಿದೆ. ಈ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ 20 ಓವರ್ ಗಳಲ್ಲಿ 156 ರನ್ ಗಳ ಸರಾಸರಿಯನ್ನು ಹೊಂದಿದೆ . ಇನ್ನೂ ಎರಡನೇ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡುವ ತಂಡದ ಸರಾಸರಿ 139 ಇರುವುದರಿಂದ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.

ಭಾರತ ಮತ್ತುಜಿಂಬಾಂಬೆಯ ನಡುವಿನ ಕಳೆದ 10 ಪಂದ್ಯಗಳ ಫಲಿತಾಂಶ ನೋಡುವುದಾದರೆ ಭಾರತ ಕಳೆದ 10 ಪಂದ್ಯಗಳಲ್ಲಿ 7 ಪಂದ್ಯ ಗಳನ್ನು ಗೆಲ್ಲುವ ಮೂಲಕ ಮೇಲುಗೈ ಸಾಧಿಸಿದೆ ಇಂದಿನ ಪಂದ್ಯದಲ್ಲಿ ಗೆಲ್ಲುವ ತಂಡ ಸರಣಿಯ 1-2 ಅಂತರವನ್ನು ಕಾಯ್ದುಕೊಳ್ಳಲಿದೆ.


Share It

You cannot copy content of this page