ಟಿ20 ವಿಶ್ವಕಪ್ ನ ಸೂಪರ್ 8 ಸುತ್ತಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 24 ರನ್ ಗಳ ಗೆಲುವು ಸಾಧಿಸುವ ಜತೆಗೆ ನೆರೆಯ ರಾಷ್ಟ್ರ ಆಫ್ಘಾನಿಸ್ತಾನ ದ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿದೆ.
ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಾಯಕ ರೋಹಿತ್ ಶರ್ಮಾ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳ ಲ್ಲಿ 5 ವಿಕೆಟ್ ನಷ್ಟಕ್ಕೆ 206 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. ಗುರಿಯನ್ನು ಬೆನ್ನತ್ತಿದ್ದ ಆಸ್ಟ್ರೇಲಿಯಾ ತಂಡ 20 ಓವರ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು 181 ರನನ ಗಳನ್ನಷ್ಟೇ ಗಳಿಸುವ ಮೂಲಕ 24 ಸೋಲನುಭವಿಸಿತು.
ಭಾರತದ ಬ್ಯಾಟಿಂಗ್ ವೇಳೆ ಆರಂಭ ಅಷ್ಟೇನೂ ಉತ್ತಮವಾಗಿರಲಿಲ್ಲ. ವಿರಾಟ್ ಕೋಹ್ಲಿ ಝಾತೆ ತೆರೆಯದೆ ಔಟಾದರೆ, ನಾಯಕ ರೋಹಿತ್ ಶರ್ಮಾ ಕೇವಲ41 ಎಸೆತಗಳಲ್ಲಿ ಭರ್ಜರಿ ಎಂಟು ಸಿಕ್ಸರ್ ಸಿಡಿಸುವ ಮೂಲಕ 92 ರನ್ ಗಳಿಸಿದರು. ನಂತರ ಸೂರ್ಯಕುಮಾರ್ ಯಾದವ್ 31, ಶಿವಂ ದುಬೆ 22 ಮತ್ತು ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ 27 ರನ್ ಗಳಿಸುವ ಮೂಲಕ ಭಾರತ 206 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು.
ಗುರಿಯನ್ನು ಬೆನ್ನತ್ತಿದ್ದ ಆಸ್ಟ್ರೇಲಿಯಾ ಆರಂಭ ಉತ್ತಮವಾಗಿದ್ದು, ಆರಂಭಿಕರಾದ ಟ್ರಾವಿಸ್ ಹೆಡ್ 76, ಮಿಚೆಲ್ ಮಾರ್ಷ್ 37 ರನ್ ರನ್ ಪೇರಿಸಿದರು. ಆದರೆ, ನಂತರ ಆಸ್ಟ್ರೇಲಿಯಾ ಬ್ಯಾಟರ್ ಗಳ ನೀರಸ ಪ್ರದರ್ಶನ ಮುಂದುವರಿಯಿತು. ಅಂತಿಮವಾಗಿ ಆಸ್ಟ್ರೇಲಿಯಾ181 ರನ್ ಗಳಿಸುವ ಮೂಲಕ 24 ರನ್ ಗಳಿಂದ ಸೋಲನುಭವಿಸಿತು. ಬೌಲಿಂಗ್ ನಲ್ಲಿ ಮಿಂಚಿದ ಹರ್ಷದೀಪ್ ಸಿಂಗ್ 3 ವಿಕೆಟ್ ಪಡೆದರೆ, ಕುಲದೀಪ್ ಯಾದವ್ ಎರಡು ವಿಕೆಟ್ ಪಡೆದರು.
ಈ ಗೆಲುವಿನೊಂದಿಗೆ ಭಾರತ ಸೆಮಿಫೈನಲ್ ಪ್ರವೇಶಿದರೆ, ಆಸ್ಟ್ರೇಲಿಯಾ ಎರಡು ಪಾಯಿಂಟ್ ನೊಂದಿಗೆ ಎರಡನೇ ಸ್ಥಾನದಲ್ಲಿದೆ. ಅಷ್ಟೇ ಪಾಯಿಂಟ್ ಹೊಂದಿರುವ ಆಫ್ಘಾನಿಸ್ತಾನ ತಂಡ ಮುಂಜಾನೆ ಏಳು ಗಂಟೆಗೆ ಬಾಂಗ್ಲಾದೇಶ ದ ವಿರುದ್ಧ ಸೆಣಸಲಿದೆ. ಇಲ್ಲಿ ಆಫ್ಘಾನಿಸ್ತಾನ ಗೆದ್ದರೆ, ಸಹಜವಾಗಿ ಸೆಮಿಫೈನಲ್ ತಲುಪಲಿದೆ. ಒಂದು ವೇಳೆ ಬಾಂಗ್ಲಾದೇಶ ಗೆದ್ದರೆ, ರನ್ ರೇಟ್ ಆಧಾರದಲ್ಲಿ ಆಸ್ಟ್ರೇಲಿಯಾ ಸೆಮಿಫೈನಲ್ ತಲುಪಲಿದೆ. ಗುರುವಾರ ಭಾರತ ಇಂಗ್ಲೆಂಡ್ ನಡುವೆ ಸೆಮಿಫೈನಲ್ ಪಂದ್ಯ ನಡೆಯಲಿದೆ.

