ಬೆಂಗಳೂರು: ವೆಸ್ಟ್ ಇಂಡೀಸ್ ದೇಶದ ಗಯಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ತಡವಾಗಿ ಟಿ-20 ವಿಶ್ವಕಪ್ ಸೆಮಿಫೈನಲ್ ಪಂದ್ಯ ಆರಂಭವಾಗುತ್ತಿದೆ.
ಮಳೆ ಕಾರಣ ಗಯಾನಾ ಸ್ಟೇಡಿಯಂನಲ್ಲಿ ಪಿಚ್ ಒದ್ದೆಯಾದ ಕಾರಣ ಟಾಸ್ ವಿಳಂಬವಾಗಿ ನಡೆಯಿತು.
ಕೊನೆಗೂ ಮಳೆ ನಿಂತ ಬಳಿಕ ಆರಂಭವಾಗುತ್ತಿರುವ 2ನೇ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಮೊದಲು ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆರಿಸಿಕೊಂಡಿದೆ.
ಹೀಗಾಗಿ, ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಇಂಗ್ಲೆಂಡ್ ತಂಡದ ತೀರ್ಮಾನಕ್ಕೆ ಖುಷಿಯಾಗಿ ನಾವು ಮೊದಲು ಟಾಸ್ ಗೆದ್ದತೆ ಬ್ಯಾಟಿಂಗ್ ಅನ್ನೇ ಮೊದಲು ಆರಿಸಿಕೊಳ್ಳುತ್ತಿದ್ದೆವು ಎಂದು ಹೇಳಿದರು.

