ಕ್ರೀಡೆ ಸುದ್ದಿ

ಕೋಹ್ಲಿ ಅರ್ಧಶತಕ, ಬುಮ್ರಾ ಯಾರ್ಕರ್, ಹಾರ್ದಿಕ್ ಲಾಸ್ಟ್ ಓವರ್, ಸೂರ್ಯಕುಮಾರ್ ಕ್ಯಾಚ್ !

Share It


ಬೆಂಗಳೂರು: ಭಾರತ ತಂಡ ವಿಶ್ವಕಪ್ ಗೆದ್ದು ಬೀಗಿದೆ. ಈ ಗೆಲುವಿಗೆ ಕಾರಣವಾಗಿದ್ದು, ಪ್ರಮುಖವಾಗಿ ಈ ನಾಲ್ಕು ಅಂಶಗಳು.

ಫೈನಲ್ ಪಂದ್ಯದಲ್ಲಿ ಎರಡು ವಿಕೆಟ್ ಬೀಳುತ್ತಿದ್ದಂತೆ ಭಾರತದ ಪತನ ಆರಂಭವಾಗಿತ್ತು. ಆದರೆ, ಕೋಹ್ಲಿ ಒಂದು ತುದಿಯಲ್ಲಿ ನಿಂತು ನಿಧಾನಗತಿಯ ಅರ್ಧಶತಕ ಗಳಿಸಿದರು. ಆದರೆ, 11 ಇನ್ನುಳಿದ 22 ರನ್ ಗಳಿಸಲು ಅವರು ತೆಗೆದುಕೊಂಡಿದ್ದು ಕೇವಲ 11 ಎಸೆತಗಳು. ಅಂತಿಮವಾಗಿ 70 ರನ್ ಗಳಿಸಿದರು.

ಉತ್ತಮ ಮೊತ್ತವಾದರೂ ದಕ್ಷಿಣ ಆಫ್ರಿಕಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿತ್ತು. ಒಂದು ಹಂತದಲ್ಲಿ 30 ಎಸೆತಗಳಲ್ಲಿ ಕೇವಲ 28 ರನ್ ಬೇಕಿತ್ತು. ಆಗ ಹಾರ್ದಿಕ್ ಪಾಂಡ್ಯ ಕ್ಲಾಸೆನ್ ವಿಕೆಟ್ ಪಡೆಯುವ ಮೂಲಕ ಆಫ್ರಿಕಾದ ಪತನ ಆರಂಭವಾಯ್ತು. ಇದು ಪಂದ್ಯದ ಗೆಲುವಿಗೆ ಒಂದು ಪ್ರಮುಖ ಘಟ್ಟವಾಯ್ತು.

17 ನೇ ಓವರ್ ಮಾಡಿದ ಜಸ್ಪೀತ್ ಬುಮ್ರಾ ಪಂದ್ಯದ ಗತಿಯನ್ನೇ ಬದಲಾಯಿಸಿದರು. ಆ ಓವರ್ ನಲ್ಲಿ ಯಾನ್ಸನ್ ಅವರನ್ನು ತಮ್ಮ ಟ್ರೇಡ್ ಮಾರ್ಕ್ ಯಾರ್ಕರ್ ನಿಂದ ಬೌಲ್ಡ್ ಮಾಡುವ ಜತೆಗೆ ಕೇವಲ ಎರಡು ರನ್ ಮಾತ್ರ ನೀಡಿದರು.

Updating…..


Share It

You cannot copy content of this page