ಫ್ಯಾರಿಸ್: ಫ್ಯಾರೀಸ್ ಒಲಂಪಿಕ್ಸ್ ನಲ್ಲಿ ಭಾರತ ಹಾಕಿ ತಂಡ ವಿಕ್ರಮವನ್ನೇ ಸಾಧಿಸಿದ್ದು, ಗ್ರೇಟ್ ಬ್ರಿಟನ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್ ತಲುಪಿದೆ.
ಭಾನುವಾರ ಭಾರತದ ಪಾಲಿಗೆ ಪದಕ ಗೆಲ್ಲಲು ನಿರ್ಣಾಯಕ ದಿನವಾಗಿತ್ತು. ಪದಕ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಇಂದಿನ ಪಂದ್ಯದಲ್ಲಿ ಭಾರತ ತಂಡ ಗ್ರೇಟ್ ಬ್ರಿಟನ್ ವಿರುದ್ಧ ಗೆಲುವು ಸಾಧಿಸಲೇಬೇಕಾಗಿದ್ದು, ಅದನ್ನು ಸಾಕಾರವಾಗಿಸಿದ ಭಾರತದ ಹುಡುಗರು ಬ್ರಿಟನ್ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದರು.
ಗ್ರೇಟ್ ಬ್ರಿಟನ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡವು 4-2 ಗೋಲುಗಳ ಅಂತರದಿಂದ ಗೆಲುವು ಸಾಧಿಸಿದ್ದು, ಪೆನಾಲ್ಟಿ ಶೂಟೌಟ್ ಮೂಲಕ ಗೆಲುವು ಸಾಧಿಸಿದ ಹರ್ಮಪ್ರೀತ್ ಸಿಂಗ್ ನೇತೃತ್ವದ ಭಾರತ ಹಾಕಿ ತಂಡ, ಸೆಮಿಫೈನಲ್ ಪ್ರವೇಶ ಪಡೆದುಕೊಂಡಿದೆ.