ಬೆಂಗಳೂರು: ಪ್ಯಾರಿಸ್ ನಲ್ಲಿ ನಡೆಯುತ್ತಿರುವ ಒಲಂಪಿಕ್ಸ್ ನಲ್ಲಿ ಭಾರತ ಹಾಕಿ ತಂಡ ಶುಭಾರಂಭ ಮಾಡಿದ್ದು, ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ.
ಕೊನೆಯ ಕ್ಷಣದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿದ ಹರ್ಮಪ್ರೀತ್ ಸಿಂಗ್ ಭಾರತದ ಗೆಲುವಿಗೆ ಕಾರಣರಾದರು. ಎರಡು ಅವಧಿಯ ಆಟದಲ್ಲಿಯೂ, ಸಮಬಲದ ಹೋರಾಟ ನಡೆಸಿದ ತಂಡಗಳು ಕೊನೆಯವರೆಗೆ ಪೈಪೋಟಿ ಕಾಯ್ದುಕೊಂಡಿದ್ದವು.
ಮೊದಲ ಅವಧಿಯಲ್ಲಿ 1-1 ಅಂತರದಲ್ಲಿ ಸಮಬಲದ ಹೋರಾಟ ನೀಡಿದ್ದ ಭಾರತ ತಂಡ ನಂತರವೂ ಉತ್ತಮ ಆಟದ ಮೂಲಕ ಗಮನ ಸೆಳೆಯಿತು. 34 ನಿಮಿಷದಲ್ಲಿ ಮತ್ತೊಂದು ಗೋಲು ಗಳಿಸಿ ಅಂತರ ಹೆಚ್ಚಿಸಿಸದರೂ, 53 ನೇ ನಿಮಿಷದಲ್ಲಿ ನ್ಯೂಜಿಲೆಂಡ್ ಮತ್ತೇ ಗೋಲು ಗಳಿಸಿ ಸಮಬಲ ಸಾಧಿಸಿತು.
ಆದರೆ, 58 ನೇ ನಿಮಿಷದಲ್ಲಿ ಸಿಕ್ಕಿದ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಹರ್ಮ್ ಪ್ರೀತ್ ಸಿಂಗ್ ಭರ್ಜರಿ ಗೋಲು ಭಾರಿಸಿವ ಮೂಲಕ ಅಂತಿಮವಾಗಿ 3-2 ಅಂತರದಲ್ಲಿ ಗೆಲುವು ಸಾಧಿಸಿತು. ಆ ಮೂಲಕ ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಗೆಕುವಿನೊಂದಿಗೆ ತನ್ನ ಅಭಿಯಾನ ಆರಂಭಿಸಿತು.
