ನವದೆಹಲಿ: ತಾಂತ್ರಿಕ ಕಾರಣದಿಂದಾಗಿ ಇಂಡಿಗೋ ವಿಮಾನವೊಂದು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿರುವ ಘಟನೆ ನಡೆದಿದೆ.
170 ಪ್ರಯಾಣಕರಿದ್ದ 15 ವರ್ಷ ಹಳೆಯ ಬೋಯಿಂಗ್ 737 ವಿಮಾನವು ವಿಶಾಪಟ್ಟಣದಿಂದ ದೆಹಲಿಗೆ ಬರುತ್ತಿದ್ದು, ಎಂಜಿನ್ ವೈಫಲ್ಯದಿಂದಾಗಿ ತುರ್ತು ಲ್ಯಾಂಡಿಗ್ ಆಗಿದೆ. ವಿಮಾನವನ್ನು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡುವಲ್ಲಿ ಪೈಲೆಟ್ ಯಶಸ್ವಿಯಾಗಿದ್ದಾರೆ.
ಶನಿವಾರ ಬೆಳಗ್ಗೆ ವಿಮಾನದ ತಾಂತ್ರಿಕ ಸಿಬ್ಬಂದಿಯಿಂದ ವಿಮಾನದ ನಂಬರ್ 1 ಎಂಜಿನ್ ನಿಷ್ಕ್ರಿಯವಾಗಿರುವ ಮಾಹಿತಿ ಬಂದಿತ್ತು. ಸಿಎಫ್‌ಎಂ-56 ಎಂಜಿನ್ ಅತಿಯಾದ ಅಲುಗಾಟದ ಹಿನ್ನೆಲೆಯಲ್ಲಿ ಕೈಕೊಟ್ಟಿತ್ತು. ವಿಮಾನ ನಿಲ್ದಾಣದ ಸಿಬ್ಬಂದಿ ಎಲ್ಲ ವ್ಯವಸ್ಥೆಯನ್ನು ರೆಡಿಮಾಡಿಕೊಂಡಿದ್ದು, ಸುಮಾರು ಬೆಳಗ್ಗೆ 10.39ಕ್ಕೆ ವಿಮಾನವು ಒಂದೇ ಎಂಜಿನ್ ಮೂಲಕ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿತು ಎಂದು ವರದಿಗಳು ತಿಳಿಸಿವೆ.

