ಕ್ರೀಡೆ ಸುದ್ದಿ

T-20 Worldcup: ಭಾರತದ ವಿರುದ್ಧ ಪಂದ್ಯವಾಡಲು ಪಾಕಿಸ್ತಾನ ರೆಡಿ: ಫೆ.15 ಕ್ಕೆ ಹೈವೋಲ್ಟೇಜ್ ಪಂದ್ಯ

Share It

ನವದೆಹಲಿ: ಬಾಂಗ್ಲಾದೇಶ ಮತ್ತು ಶ್ರೀಲಂಕಾದ ಮನವೊಲಿಕೆಯ ನಂತರ ಪಾಕಿಸ್ತಾನ ಸರ್ಕಾರ ತನ್ನ ಬಹಿಷ್ಕಾರದ ಕರೆಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದು, ಟಿ-20 ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನಿಗದಿಯಂತೆ ನಡೆಯಲಿದೆ.

ಇದರೊಂದಿಗೆ ಪಂದ್ಯದ ಮೇಲಿದ್ದ ಕರಿನೆರಳು ದೂರವಾಗಿದ್ದು, ಫೆಬ್ರವರಿ 15ರಂದು ಶ್ರೀಲಂಕಾದ ಕೊಲಂಬೊದಲ್ಲಿ ಸಾಂಪ್ರದಾಯಿಕ ಬದ್ಧವೈರಿಗಳ ನಡುವೆ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ.

“ವಿವಿಧ ಮಟ್ಟದ ಚರ್ಚೆಗಳ ನಂತರ ಪಾಕಿಸ್ತಾನ ಸರ್ಕಾರ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಮೈದಾನಕ್ಕಿಳಿಸಲು ನಿರ್ಧರಿಸಿದೆ” ಎಂದು ಪಾಕಿಸ್ತಾನ ಸರ್ಕಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕುರಿತಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(ಬಿಸಿಬಿ)ಯ ಅಧ್ಯಕ್ಷ ಅಮೀನುಲ್ ಇಸ್ಲಾಂ, ಢಾಕಾದಲ್ಲಿ ಹೇಳಿಕೆ ನೀಡಿದ ನಂತರ ಬಹಿಷ್ಕಾರ ಹಿಂಪಡೆಯುವುದು ಸ್ಪಷ್ಟವಾಗಿದೆ.

ಈ ಸಂಬಂಧ ನಡೆದ ಬೆಳವಣಿಗೆಯಲ್ಲಿ, ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ, ಕರೆ ಮಾಡಿ ತಂಡಕ್ಕೆ ಪಂದ್ಯವಾಡಲು ಅವಕಾಶ ನೀಡುವಂತೆ ಒತ್ತಾಯಿಸಿದ್ದರು. ಬಿಕ್ಕಟ್ಟನ್ನು ಸೌಹಾರ್ದಯುತವಾಗಿ ಪರಿಹರಿಸಲು ಅವಕಾಶ ನೀಡಬೇಕು ಎಂದು ಪಾಕ್ ಪ್ರಧಾನಿಗೆ ವಿನಂತಿಸಿದ್ದಾಗಿ ಮೂಲಗಳು ತಿಳಿಸಿವೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಮೊಹ್ಸಿನ್ ನಖ್ವಿ, ಭಾನುವಾರ ಐಸಿಸಿ ಜತೆ ತಮ್ಮ ಮಾತುಕತೆ ಬಗ್ಗೆ ಷರೀಫ್‌ಗೆ ವಿವರಿಸಿದ್ದು, ಇದಾದ ನಂತರ ಪಾಕ್ ಸರ್ಕಾರದ ಹೇಳಿಕೆ ಹೊರಬಿದ್ದಿದೆ. ಇದಕ್ಕೂ ಮುನ್ನ, ಅಂತಿಮ ನಿರ್ಧಾರ ಕೈಗೊಳ್ಳಲು ಇನ್ನೊಂದು ದಿನ ಬೇಕಾಗುತ್ತದೆ ಎಂದು ನಖ್ವಿ ಹೇಳಿದ್ದರು.


Share It

You cannot copy content of this page