ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಉದ್ಘಾಟನಾ ಪಂದ್ಯದ ವೇಳೆ ಸರಣಿ ಮೊಬೈಲ್ ಕಳ್ಳತನ ನಡೆದಿದ್ದು, ಇದೊಂದು ನಿಯೋಜಿತ ಕೃತ್ಯ ಎಂದು ಕೆಲವರು ಆರೋಪಿಸಿದ್ದಾರೆ.
ಪಂದ್ಯದ ವೇಳೆ ಸುಮಾರು 12 ಮೊಬೈಲ್ಗಳು ಕಳವಾಗಿರುವ ಕುರಿತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪಂದ್ಯ ನಡೆದ ದಿನ ಮತ್ತು ಮರುದಿನ ದೂರುಗಳು ಬಂದಿದ್ದು, ಎಲ್ಲರೂ ಪಂದ್ಯದ ಸಮಯದಲ್ಲಿಯೇ ಮೊಬೈಲ್ ಕಳೆದುಕೊಂಡಿರುವ ಕುರಿತು ದೂರಿದ್ದಾರೆ.
ಈ ನಡುವೆ ಅಪ್ರಾಪ್ತರ ಕಡೆಯಿಂದ ಕಳ್ಳತನ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದ್ದು, ಟಿಕೆಟ್ ಪಡೆದು ಸ್ಟೇಡಿಯಂ ಒಳಬಂದು ಕಳ್ಳತನ ಮಾಡಿಸಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಇದೊಂದು ನಿಯೋಜಿತ ಕೃತ್ಯವೇ ಆಗಿದ್ದು, ಅಪ್ರಾಪ್ತರನ್ನು ಟಿಕೆಟ್ ಖರೀದಿಸಿ ಒಳಗೆ ಕಳುಹಿಸಿ ಪ್ರಾಪ್ತರ ಕಡೆಯಿಂದ ಕಳ್ಳತನ ಮಾಡಿಸಿದ್ದಾರೆ ಎಂದು ಎಂದು ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯೊಬ್ಬರು ಆರೋಪ ವ್ಯಕ್ತಪಡಿಸಿದ್ದಾರೆ.

