ನವದೆಹಲಿ: ಇರಾನ್ ಮೇಲಿನ ದಾಳಿ ತೀವ್ರಗೊಂಡಿದ್ದು, ಇರಾನ್ ಕೊಲ್ಲೆ ರಾಷ್ಟ್ರಗಳ ವ್ಯಾಪಾರಿ ಹಡಗುಗಳ ಮೇಲೆ ನಡೆಸಿದ ದಾಳಿಯಲ್ಲಿ ಇಬ್ಬರು ಭಾರತೀಯ ಪ್ರಜೆಗಳು ಸಾವನ್ನಪ್ಪಿದ್ದು, ಮತ್ತೊಬ್ಬ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.
ಈ ಕುರಿತು ಭಾರತೀಯ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದ್ದು, ಕೊಲ್ಲಿ ಯುದ್ದದಿಂದ ಭಾರತದ ಮಾರುಕಟ್ಟೆ ಮೇಲೆ ಮಾತ್ರ ಪರಿಣಾಮ ಬೀರುವುದಲ್ಲದೇ, ಭಾರತೀಯರ ಸಾವಿನ ಸಂಖ್ಯೆಯೂ ಹೆಚ್ಚಾಗಿದೆ. ಯುದ್ಧ ಆರಂಭವಾದ ನಂತರ ಆರು ಭಾರತೀಯರು ಸಾವನ್ನಪ್ಪಿದ್ದು, ಆತಂಕಕ್ಕೆ ಕಾರಣವಾಗಿದೆ.
ಇರಾನ್ ಕೊಲ್ಲೆ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದರೆ, ಇಸ್ರೇಲ್ ಮತ್ತು ಅಮೇರಿಕ ಇರಾನ್‌ನ ಇಂಧನ ಸ್ಥಾವರಗಳ ಮೇಲೆ ದಾಳಿಯನ್ನು ಮುಂದುವರಿಸಿದೆ. ಹರ್ಮಾಜ್ ಜಲಸಂಧಿ ಬಂದ್ ಮಾಡಿರುವ ಇರಾನ್, ಅಲ್ಲಿನ ವಾಣಿಜ್ಯ ಹಡಗುಗಳನ್ನೆಲ್ಲ ತಡೆದು ನಿಲ್ಲಿಸಿದೆ ಎಂದು ವರದಿಗಳು ತಿಳಿಸಿವೆ.

