ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಎ-1 ಆರೋಪಿ ಪವಿತ್ರಾ ಗೌಡರನ್ನು ಆಕೆಯ ಮನೆಗೆ ಮಹಜರು ಮಾಡಲು ಪೊಲೀಸರು ಕರೆತಂದಿದ್ದರು. ಮನೆಯಿಂದ ಹೊರಬರುವಾಗ ಆಕೆ ಮತ್ತೊಬ್ಬ ಆರೋಪಿ ಪವನ್ ನನ್ನು ನೋಡಿ ಖುಷಿಯಿಂದ ನಗುತ್ತಿದ್ದಳು. ನಂತರ ಕ್ಯಾಮೆರಾ ಕಂಡ ಮೂತಿ ತಿರುಗಿಸಿ ಪೋಸ್ ಕೊಟ್ಟಿದ್ದಳು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಕೊಲೆಯಾಗಿದ್ದರೂ, ಆ ಪಾಪಪ್ರಜ್ಞೆಯೂ ಆಕೆಯನ್ನು ಕಾಡುತ್ತಿಲ್ಲವಲ್ಲ ಎಂದು ಅನೇಕರು ಆಕ್ರೋಶವ್ಯಕ್ತಪಡಿಸಿದ್ದರು. ಇನ್ನು ಕೆಲವರು, ಆಪ್ತಮಿತ್ರ ಸಿನಿಮಾದಲ್ಲಿ ಬರುವ ಅವಿನಾಶ್ ಪಾತ್ರದ ಡೈಲಾಗ್ ಸೆಟ್ ಮಾಡಿ, ವಿಡಿಯೋವನ್ನು ಮತ್ತಷ್ಟು ವೈರಲ್ ಮಾಡಿದ್ದರು.
ಅಷ್ಟಕ್ಕೂ ಆ ಸಿನಿಮಾದಲ್ಲಿ ಬರುವ ಡೈಲಾಗ್ ಏನ್ ಗೊತ್ತಾ….ನಾನ್ ಅವತ್ತು ಅವರ ಮುಖದಲ್ಲೊಂದು ತೇಜಸ್ಸು ನೋಡ್ದೆ, ಏನನ್ನೋ ಸಾಧಿಸಿದ ಆತ್ಮವಿಶ್ವಾಸ ಅವರ ಮುಖದಲ್ಲಿತ್ತು’. ಈ ಡೈಲಾಗ್ ಪವಿತ್ರಾ ಗೌಡರ ಆವತ್ತಿನ ನಡೆಗೂ ಹೊಂದುವಂತಹದ್ದೇ?
ಹಾಗಾದ್ರೆ, ಕೊಲೆ ಆರೋಪದಲ್ಲಿ ಎ-1 ಆಗಿ ಜೈಲು ಸೇರಿದ್ದರು, ಪವಿತ್ರಾ ಗೌಡಗೆ ಆ ನಗು ಬಂದಿಯಾಕೆ ಎಂಬ ಪ್ರಶ್ನೆ ಅನೇಕರದ್ದು. ಅದಕ್ಕೆ ಉತ್ತರ ಇಲ್ಲಿದೆ ನೋಡಿ…
ಪವಿತ್ರಾ ಗೌಡ ಸಣ್ಣ ವಯಸ್ಸಿನಲ್ಲಿಯೇ ಕೌಟುಂಬಿಕ ಜೀವನವನ್ನು ಹಾಳುಗೆಡವಿಕೊಂಡಿದ್ದರು. ಪತಿಯಿಂದ ದೂರವಾಗಿ ಜೀವನಕಟ್ಟಿಕೊಳ್ಳುವ ಪ್ರಯತ್ನ ನಡೆಸಿದ್ದರು. ಹೀಗಾಗಿಯೇ, ಸಿನಿಮಾ ರಂಗದಲ್ಲಿ ಅವರಿಗೆ ಅಂದುಕೊಂಡ ಮಟ್ಟಿಗೆ ಯಶಸ್ಸು ಸಿಗಲಿಲ್ಲ. ಇಂತಹ ಯಶಸ್ಸು ಸಿಗುವುದು ಸುಲಭವೂ ಅಲ್ಲ.
ಆದರೆ, ದರ್ಶನ್ ಸ್ನೇಹ ಸಂಪಾದನೆ ಮಾಡುವಲ್ಲಿ ಪವಿತ್ರಾ ಗೌಡ ಯಶಸ್ವಿಯಾಗಿದ್ದರು. ದರ್ಶನ್ ಪವಿತ್ರಾಗೆ ಕಾರು ಕೊಡಿಸಿದ್ದಾರೆ, ಫ್ಲಾಟ್ ಕೊಡಿಸಿದ್ದಾರೆ ಎಂಬೆಲ್ಲ ಮಾತುಗಳಿದ್ದರೂ, ಜಗತ್ತಿನ ಎದುರಿಗೆ ನಮ್ಮದ್ದು ಇಂತಹದ್ದೇ ಸಂಬಂಧ ಎಂದು ಹೇಳಿಕೊಳ್ಳಲು ಸಾಧ್ಯವಾಗಲಿಲ್ಲ.
ದರ್ಶನ್ ಮತ್ತು ವಿಜಯಲಕ್ಷ್ಮಿ ಅವರ ವಿವಾಹ ವಾರ್ಷಿಕೋತ್ಸವ ಸಂದರ್ಭದಲ್ಲಿ ದರ್ಶನ್ ಮತ್ತು ನನ್ನ ಸಂಬಂಧಕ್ಕೆ ಹತ್ತು ವರ್ಷ.. ಎಂದು ಪೋಸ್ಟ್ ಮಾಡಿಕೊಂಡರಾದರೂ, ಅದು ಯಾವ ರೀತಿಯ ಸಂಬಂಧ ಎಂಬುದು ಸಮಾಜದ ಕಣ್ಣಿನಲ್ಲಿ ಪ್ರಶ್ನಾರ್ಥಕವಾಗಿಯೇ ಉಳಿದಿತ್ತು.
ದರ್ಶನ್ ಪತ್ನಿಯಂತೆಯೇ ಬಟ್ಟೆ ಕೊಳ್ಳುವುದು, ಕಾರು ಕೊಳ್ಳುವುದು, ಫ್ಲಾಟ್ ಕೊಳ್ಳುವುದು, ಅವರು ಹೋಗಿದ್ದ ಹೋಟೆಲ್‌ನಲ್ಲಿಯೇ ಊಟ ಮಾಡುವುದು, ಪೋಟೋ ತೆಗೆಸಿಕೊಳ್ಳುವುದೆಲ್ಲ ಮಾಡಿದರೂ, ಅದಕ್ಕೊಂದು ಅಧಿಕೃತ ಮಾನ್ಯತೆ ಸಿಗುವಂತೆ ಮಾಡಿಕೊಳ್ಳುವುದು ಮಾತ್ರ ಸಾಧ್ಯವೇ ಆಗಿರಲಿಲ್ಲ.
ಆದರೆ, ರೇಣುಕಾ ಸ್ವಾಮಿ ಕೊಲೆ ನಡೆದ ನಂತರ ದರ್ಶನ್ ಮತ್ತು ಪವಿತ್ರಾ ಗೌಡ ಸಂಬಂಧಕ್ಕೆ ಒಂದು ಕ್ಲಾರಿಟಿ ಸಿಕ್ಕಂತಾಯ್ತು. ಸ್ವತಃ ಪೊಲೀಸ್ ಕಮೀಷನರ್ ದರ್ಶನ್ ಪತ್ನಿ ಪವಿತ್ರಾ ಎಂದು ಹೇಳಿಕೆ ನೀಡಿದ್ದರು. ರಾಷ್ಟಿçÃಯ ಸುದ್ದಿ ವಾಹಿನಿಗಳು, ದರ್ಶನ್ ಪತ್ನಿಗೆ ಅಶ್ಲೀಲ ಸಂದೇಶ, ವ್ಯಕ್ತಿಯ ಕೊಲೆ ಎಂದೇ ಸುದ್ದಿ ಭಿತ್ತರಿಸಿದವು.
ದರ್ಶನ್ ಬಂಧನವಾಗುತ್ತಿದ್ದಂತೆ, ಪವಿತ್ರಾ ಗೌಡಗೆ ಕೊಲೆಯಾಗಿದೆ ಎಂಬ ಆತಂಕ, ಪಾಪಪ್ರಜ್ಞೆಗಿಂತ, ದರ್ಶನ್ ಹೆಸರು ತನ್ನ ಜತೆಗೆ ಥಳುಕು ಹಾಕಿಕೊಂಡ ರೀತಿ ಅತ್ಯಂತ ಖುಷಿಕೊಟ್ಟಿದೆ. ಕೆಲವರಿಗಷ್ಟೇ ಗೊತ್ತಿದ್ದ ನಮ್ಮಿಬ್ಬರ ಸಂಬಂಧ ಇಡೀ ದೇಶಕ್ಕೆ ಗೊತ್ತಾಗುವಂತಾಗಿದ್ದು ಕೊಲೆ ಪ್ರಕರಣದಿಂದ ಎಂಬ ಭಾವ ಆವರಿಸಿದೆ ಎನ್ನಬಹುದು.
ಕೊಲೆ ಪ್ರಕರಣದ ತನಿಖೆ, ಶಿಕ್ಷೆ, ನಂತರದ ಜೀವನ, ದರ್ಶನ್ ಜತೆಗಿನ ಬಾಂಧವ್ಯಗಳೆಲ್ಲವೂ ಮುಂದಕ್ಕೆ ಏನೇ ಆಗಲಿ, ಪವಿತ್ರಾ ಗೌಡಗೆ ದರ್ಶನ್ ಜತೆಗಿನ ಸಂಬಂಧ ಏನು ಎಂಬ ಕ್ಲಾರಿಟಿ, ಜಗತ್ತಿಗೆ ಗೊತ್ತಾಗಿದ್ದು ಹೆಮ್ಮೆ ಎನಿಸಿದೆ. ಮುಂದೆ ಅದು ಉಳಿಯಲಿ, ಅಳಿಯಲಿ ಏನನ್ನೋ ಸಾಧಿಸಿದ ತೃಪ್ತಿಯಂತೂ ಪವಿತ್ರಾ ಗೌಡರದ್ದು.

