ಇಸ್ರೋ ರಾಕೆಟ್‌ಗೆ ಸಂಕಷ್ಟ: ಕಕ್ಷೆ ತಲುಪುವಲ್ಲಿ ವಿಫಲ
ಬೆಂಗಳೂರು: ಇಸ್ರೋ ಉಡಾವಣೆ ಮಾಡಿದ್ದ ಮಹತ್ವಾಕಾಂಕ್ಷೆಯ ಪಿಎಸ್‌ಎಲ್‌ವಿ-ಸಿ62 ಉಪಗ್ರಹ ತಾಂತ್ರಿಕ ದೋಷದಿಂದ ಕಕ್ಷೆ ಸೇರುವಲ್ಲಿ ವಿಫಲವಾಗಿದೆ.
ಶ್ರೀಹರಿಕೋಟಾದಿಂದ ಇಂದು ಬೆಳಗ್ಗೆಯಷ್ಟೇ ಉಪಗ್ರಹ ಉಟಾವಣೆ ಮಾಡಲಾಗಿತ್ತು, ಉಡಾವಣೆಯ ಸಂದರ್ಭದಲ್ಲಿಯೇ ಕೆಲವು ತಾಂತ್ರಿಕ ದೋಷಗಳು ಕಾಣಿಸಿಕೊಂಡವು. ಆದರೂ, ಅವೆಲ್ಲ ಅಡೆತಡೆಗಳನ್ನು ಮೀರಿ ಉಡಾವಣೆ ಮಾಡಲಾಗಿತ್ತು.
ಆದರೆ, ಮೂರನೇ ಹಂತದಲ್ಲಿ ಕಕ್ಷೆ ಸೇರುವಲ್ಲಿ ಉಪಗ್ರಹ ವಿಫಲವಾಗಿದ್ದು, ದಿಕ್ಕು ಬದಲಾಯಿಸಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ಉಪಗ್ರಹ ಯಶಸ್ವಿಯಾಗಿ ಕಕ್ಷೆಗೆ ಸೇರಲಿಲ್ಲ ಎಂದು ವರದಿಯಾಗಿದೆ.


