ಅಪರಾಧ ಸಿನಿಮಾ ಸುದ್ದಿ

ದರ್ಶನ್ ಅರೆಸ್ಟ್ ಪ್ರಕ್ರಿಯೆಗೆ ಜಗ್ಗೇಶ್ ಮಾರ್ಮಿಕ ಪ್ರತಿಕ್ರಿಯೆ

Share It


ಬೆಂಗಳೂರು: ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದು, ಈವರೆಗೆ ಸಿನಿಮಾ ರಂಗದ ಯಾವೊಬ್ಬ ವ್ಯಕ್ತಿಯೂ ಪ್ರತಿಕ್ರಿಯಿಸಿರಲಿಲ್ಲ. ಇದೀಗ ಜಗ್ಗೇಶ್ ಮಾರ್ಮಿಕವಾಗಿ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಜಗ್ಗೇಶ್ ತಮ್ಮ ಎಕ್ಸ್ ಖಾತೆಯಲ್ಲಿ ಯಾರನ್ನೂ ಕೊಲ್ಲುವ ಹಕ್ಕು ನಮಗಿಲ್ಲ, ಕರ್ಮ ಜೀವನವನ್ನು ಹಿಂಬಾಲಿಸುತ್ತದೆ. ಕಲಿಯುಗದಲ್ಲಿ ಕರ್ಮಕ್ಕೆ ತತಕ್ಷಣವೇ ಶಿಕ್ಷೆ‌ಸಿಗುತ್ತದೆ, ರಾಮನಾಗು, ರಾವಣನಾಗಬೇಡ ಅಂತ್ಯ‌ ಖಂಡಿತ ಎಂದು ಸನಾತನ ಸಂಸ್ಕ್ರತಿ ಹೇಳುತ್ತದೆ ಎಂದು ಬರೆದುಕೊಂಡಿದ್ದಾರೆ.

ಪವಿತ್ರಾ‌ಗೌಡಗೆ ಕೆಟ್ಟದಾಗಿ ಮೆಸೇಜ್ ಮಾಡಿದ ಎಂಬ ಕಾರಣಕ್ಕೆ‌ ರೇಣುಕಾಸ್ವಾಮಿ ಎಂಬಾತನನ್ನು ಹೊಡೆದು ಕೊಲ್ಲಲಾಗಿದೆ. ಪ್ರಮುಖವಾಗಿ ದರ್ಶನ್ ಮತ್ತು ಪವಿತ್ರಾ ಕೂಡ ಸ್ಥಳದಲ್ಲಿದ್ದು, ಕೊಲೆಗೆ ಪ್ರಚೋದನೆ ನೀಡಿದರು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಹೀಗಾಗಿ ಅವರನ್ನು ಬಂಧಿಸಿ, ನ್ಯಾಯಾಲಯ ಆರು ದಿನ ಕಸ್ಟಡಿಗೆ ಕೊಟ್ಟಿದೆ.

ರಾಜ್ಯಾದ್ಯಂತ ದರ್ಶನ್ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಸಿನಿಮಾ ರಂಗ ಸೈಲೆಂಟ್ ಆಗಿರುವುದರ‌ ಕುರಿತು ಕೂಡ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಹೆಂಡತಿಗೆ ಹೊಡೆದು ಜೈಲು ಸೇರಿದ್ದಾಗ ಇಡೀ ಚಿತ್ರರಂಗ ಒಂದಾಗಿ ಆತನ ಬಿಡುಗಡೆಗೆ ಬಂದಿತ್ತು. ಈಗ ಕೊಲೆ ಮಾಡಿದಾಗ ಸೈಲೆಂಟಾಗಿದೆ‌ ಎಂಬ ಆಕ್ರೋಶ ವ್ಯಕ್ತವಾಗಿದೆ.

ಈ ನಡುವೆ ಜಗ್ಗೇಶ್ ಮಾತ್ರ ನೇರವಾಗಿ ಮಾತನಾಡದೆ, ಮಾರ್ಮಿಕವಾಗಿ ಮಾತನಾಡಿದ್ದಾರೆ. ಈ ಹಿಂದೆ ಜಗ್ಗೇಶ್ ಮೇಲೆ ಕೂಡ ದರ್ಶನ್ ಅಭಿಮಾನಿಗಳು ಹಲ್ಲೆ ನಡೆಸಿದ್ದರು. ಆಗ ದರ್ಶನ್ ನನ್ನ ಸೆಲೆಬ್ರಿಗಳ ಪರ ನಾನಿದ್ದೇನೆ ಎಂದಿದ್ದರು. ಜಗ್ಗೇಶ್ ಮತ್ತು ದರ್ಶನ್ ನಡುವೆ ಆಗಿನಿಂದ ಮುಸುಕಿನ ಗುದ್ದಾಟ ಇದ್ದೇ ಇತ್ತು.

ಜಗ್ಗೇಶ್ ಮಾಡಿರುವ ಟ್ವೀಟ್ ಈ ರೀತಿ ಇದೆ.

ಸರ್ವಆತ್ಮಾನೇನಬ್ರಹ್ಮ
ಸರ್ವ ಜೀವಿಯಲ್ಲಿ ದೇವರಿದ್ದಾನೆ
ಯಾರನ್ನು ಕೊಲ್ಲುವ ಹಕ್ಕು ಜೀವನಿಗಿಲ್ಲಾ!
ಕರ್ಮ ಜೀವನನ ಹಿಂದೆ ಹಿಂಬಾಲಿಸುತ್ತದೆ
ಅವನ ಪಾಪಕರ್ಮ ಅವನ ಸುಡುತ್ತದೆ!
ಕಲಿಯುಗದಲ್ಲಿ ದೇವರು ಕಲ್ಲಲ್ಲಾ
ಎಲ್ಲಾ ಕರ್ಮಕ್ಕು ತತಕ್ಷಣ ಪಲಿತಾಂಶ
ಉಂಟು!
ರಾಮನಾಗು ರಾವಣನಾದರೆ ಅಂತ್ಯ ಎಂದಿದೆ ಸನಾತನ ಕೃತಿ!
ಮದಕ್ಕೆ ಕಾರುಣ್ಯದ ಅರಿವಿಲ್ಲಾ!


Share It

You cannot copy content of this page