ಬೆಂಗಳೂರು: ನಟಿ ಕಂ ಮಾಡೆಲ್ ಪವಿತ್ರಾ ಗೌಡ ಹೊಟ್ಟೆಕಿಚ್ಚು ಎಷ್ಟರಮಟ್ಟಿನದ್ದು ಎಂದು ಇಡೀ ಕರ್ನಾಟಕವೇ ನೋಡಿದೆ. ಅವರ ಹಠ ಮತ್ತು ಹೊಟ್ಟಿಕಿಚ್ಚಿನ ಕಾರಣಕ್ಕೆ ಇಂದು ದರ್ಶನ್ ಜೈಲು ಸೇರುವಂತಾಗಿದೆ.
ಸೋಮವಾರ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮತ್ತು ಪುತ್ರ ವಿನೀಶ್ ಜೈಲಿನಲ್ಲಿರುವ ದರ್ಶನ್ ಭೇಟಿ ಮಾಡಿದ್ದರು. ಈ ವಿಷಯ ಅದೇ ಜೈಲಿನಲ್ಲಿರುವ ಪವಿತ್ರಾ ಗೌಡಗೆ ಗೊತ್ತಾಗುತ್ತಿದ್ದಂತೆ ಆಕೆ ಸಿಡಿಮಿಡಿಗೊಂಡಿದ್ದಾಳೆ ಎನ್ನಲಾಗಿದೆ.
ತಮ್ಮ ಕುಟುಂಬದ ಸದಸ್ಯರಿಗೆ ಕರೆ ಮಾಡಿ, ನನ್ನನ್ನು ನೋಡಲು ನೀವ್ಯಾಕೆ ಬಂದಿಲ್ಲ ಎಂದು ತಮ್ಮ ಮತ್ತು ತಾಯಿಗೆ ಆವಾಜ್ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪವಿತ್ರಾ ಗೌಡರ ಆವಾಜ್ಗೆ ಬೆದರಿದ ಅವರ ಕುಟುಂಬ ಸದಸ್ಯರು ಮಂಗಳವಾರ ಜೈಲಿಗೆ ಭೇಟಿ ನೀಡಿದ್ದಾರೆ.
ಪವಿತ್ರಾ ಗೌಡ ಪುತ್ರಿ ಖುಷಿ, ಅವರ ತಾಯಿ ಮತ್ತು ಸಹೋದರ ಜೈಲಿಗೆ ಭೇಟಿ ನೀಡಿ ಪವಿತ್ರಾ ಗೌಡಗೆ ತಾವು ತಂದಿದ್ದ ಕೆಲ ವಸ್ತುಗಳನ್ನು ನೀಡಿ ವಾಪಸ್ಸಾಗಿದ್ದಾರೆ. ಪುತ್ರಿಯನ್ನು ಕಂಡು ಪವಿತ್ರಾ ಗೌಡ ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ.
ದರ್ಶನ್ ಮಡದಿ ವಿಜಯಲಕ್ಷ್ಮಿ ತೊಡುವ ಬಟ್ಟೆ, ಅವರು ಬಳಸುವ ಕಾರ್ ಮತ್ತು ಅವರು ಉಳಿದುಕೊಳ್ಳುವ ಹೋಟೆಲ್ ಸೇರಿ ಎಲ್ಲದ್ದರಲ್ಲೂ ಅವರನ್ನೇ ಅನುಕರಣೆ ಮಾಡುತ್ತಿದ್ದ ಪವಿತ್ರಾ ಗೌಡ, ವಿಜಯಲಕ್ಷ್ಮಿಯಂತೆಯೇ ತಾನು ಇರಬೇಕು ಎಂದು ಹಠಕ್ಕೆ ಬೀಳುತ್ತಿದ್ದರು.
ವಿಜಯಲಕ್ಷ್ಮಿ ಬಗ್ಗೆ ಮಾತನಾಡಿದ್ದಕ್ಕೆ ರೇಣುಕಾ ಸ್ವಾಮಿಗೆ ನೀನೇನೂ ಮಾಡ್ತಿಲ್ಲ ಎಂದು ಹಠಕ್ಕೆ ಬಿದ್ದು, ಕೊನೆಗೆ ರೇಣುಕಾ ಸ್ವಾಮಿ ಕಿಡ್ನಾಪ್ ಮಾಡಲಾಗಿತ್ತು. ಇದೀಗ ಜೈಲಿಗೆ ಬಂದ ವಿಷಯದಲ್ಲಿಯೂ ಪವಿತ್ರಾ ತಮ್ಮ ಜಲಸಿ ಮುಂದುವರಿಸಿದ್ದಾರೆ ಎಂಬುದು ವರದಿಯಾಗಿದೆ.
ಜೈಲಿಗೆ ಬಂತು ಪವಿತ್ರಾ ಗೌಡ ಮೇಕಪ್ ಕಿಟ್: ಕುಟುಂಬ ಸದಸ್ಯರಿಗೆ ಆವಾಜ್ ಹಾಕುವ ಜತೆಗೆ ಜೈಲಿಗೆ ತನ್ನ ಮೇಕಪ್ ಕಿಟ್ ತರುವಂತೆ ಪವಿತ್ರಾ ತಾಕೀತು ಮಾಡಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪವಿತ್ರಾ ಮಗಳೊಂದಿಗೆ ಆಗಮಿಸಿದ, ಅವರ ತಾಯಿ ಮತ್ತು ಸಹೋದರ ಬ್ಯಾಗ್ನಲ್ಲಿ ಪವಿತ್ರಾ ಮೇಕಪ್ ಕಿಟ್ ಮತ್ತು ಇನ್ನಿತರ ವಸ್ತುಗಳನ್ನು ತಂದುಕೊಟ್ಟಿದ್ದಾರೆ ಎನ್ನಲಾಗಿದೆ.

