ಕಾರವಾರ: ಜೆಡಿಎಸ್ ನಾಯಕಿಯ ಪುತ್ರನ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಯುವತಿಯ ಶವವನ್ನು ಹೊರತೆಗೆದು ಮರುಶವಪರೀಕ್ಷೆ ನಡೆಸಲಾಗಿದೆ.
ಜ ೯ರಂದು ಜೆಡಿಎಸ್ ನಾಯಕಿ ಚೈತ್ರಾ ಕೊಠಾರ್ಕರ್ ಪುತ್ರ ಚಿರಾಗ್ ಕಿರುಕುಳದಿಂದ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಚಿರಾಗ್ ವಿರುದ್ಧ ಯುವತಿಯ ಪೋಷಕರು ದೂರು ದಾಖಲಿಸಿದ್ದರು. ಚಿರಾಗ್ ತಲೆ ಮರೆಸಿಕೊಂಡಿದ್ದ.
ಮೃತ ಯುವತಿಯ ತಾಯಿ ನೀಡಿದ ದೂರಿನ ಅನ್ವಯ ಪೊಲೀಸರು ಕದ್ರಾ ಗ್ರಾಮದ ಕ್ರಿಶ್ಚಿಯನ್ ಸ್ಮಶಾನದಿಂದ ಯುವತಿಯ ಮೃತದೇಹ ಹೊರತೆಗೆದು ಪರೀಕ್ಷೆ ನಡೆಸಿದರು. ಈ ಪ್ರಕ್ರಿಯೆಯನ್ನು ಪೋಷಕರ ಸಮ್ಮುಖದಲ್ಲಿ ನಡೆಸಲಾಯಿತು.
ಶವ ಮರುಪರೀಕ್ಷೆ ಪ್ರಕ್ರಿಯೆಯಲ್ಲಿ ಧಾರವಾಡ ಮತ್ತು ಮಂಗಳೂರು ವೈದ್ಯರ ತಂಡ ಭಾಗವಹಿಸಿತ್ತು. ಪೊಲೀಸರು ತಜ್ಞರ ವರದಿಯನ್ನು ಪಡೆದು, ಮುಂದಿನ ಕ್ರಮ ಕೈಗೊಳ್ಳಲು ತೀರ್ಮಾನಿಸಿದರು.

