ಹಾಸನ:ಲೈಂಗಿಕ ದೌರ್ಜನ್ಯ ಕ್ಕೂ ಎಚ್.ಡಿ. ರೇವಣ್ಣ ಕುಟುಂಬಕ್ಕೂ ಬಿಡಿಸಲಾರದ ನಂಟು ಎಂಬಂತಾಗಿದೆ ಅವರ ಪಾಡು. ಇದೀಗ ಇದೇ ಆರೋಪದಲ್ಲಿ ರೇವಣ್ಣ ಕುಟುಂಬದ ಕೊನೆಯ ವ್ಯಕ್ತಿಯ ಬಂಧನವಾಗಿದೆ.
ಅರಕಲಗೂಡು ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತನೊಬ್ಬನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ದ ಆರೋಪದಲ್ಲಿ ದೂರು ದಾಖಲಾಗಿತ್ತು. ದೂರಿನ ತನಿಖೆ ಕೈಗೆತ್ತಿಕೊಂಡ ಹಾಸನ ಪೊಲೀಸರು ವಿಧಾನ ಪರಿಷತ್ ಸದಸ್ಯರೂ ಆಗಿರುವ ಸೂರಜ್ ರೇವಣ್ಣ ಅವರನ್ನು ಬಂಧಿಸಿದ್ದಾರೆ.
ಸಂತ್ರಸ್ತ ಯುವಕ ಶನಿವಾರ ಸಂಜೆ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಸೂರಜ್ ಅವರನ್ನು ಕರೆಸಿ ವಿಚಾರಣೆ ನಡೆಸಿದ ಪೊಲೀಸರು, ನಂತರ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಆರೋಪ ಮಾಡಿರುವ ಯುವಕನನ್ನು ಪೊಲೀಸರು ವೈದ್ಯಕೀಯ ಪರೀಕ್ಷೆಗಾಗಿ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ ಎನ್ನಲಾಗಿದೆ. ಇನ್ನು ತಾವು ನೀಡಿದ್ದ ಬ್ಲಾಕ್ ಮೇಲ್ ದೂರಿಗೆ ಸಾಕ್ಷ್ಯ ಒದಗಿಸಲಪೊಲೀಸರ ಮುಂದೆ ಹಾಜರಾಗಿದ್ದ ಸೂರಜ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಆರೋಪಿ ವಿರುದ್ಧ ತಮ್ಮ ಸಹಾಯಕನ ಮೂಲಕ ಸೂರಜ್ ಬ್ಲಾಕ್ ಮೇಲ್ ದೂರು ಕೊಡಿಸಿದ್ದರು. ಆರೋಪಿ, ಹಣಕ್ಕಾಗಿ ಡಿಮ್ಯಾಂಡ್ ಮಾಡುತ್ತಿದ್ದಾನೆ ಎಂಬುದು ಅವರ ಆರೋಪವಾಗಿತ್ತು. ಅವರ ಬಳಿಯಿದ್ದ ಆಡಿಯೋ ರೆಕಾರ್ಡ್ ಮತ್ತು ಪೋಟೋ ಸಾಕ್ಷ್ಯಗಳನ್ನು ಕೊಡುವ ಸಲುವಾಗಿ ಸೂರಜ್ ಪೊಲೀಸರ ಮುಂದೆ ಬಂದಿದ್ದರು. ಇದೇ ವೇಳೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.
updating…
