ಕೋಲಾರ: ಕೋಲಾರದಲ್ಲಿ ರಾಜ್ಯದ ಮೊದಲ ಲೋಕಸಭಾ ಕ್ಷೇತ್ರದ ಫಲಿತಾಂಶ ಪ್ರಕಟವಾಗಿದ್ದು, ಜೆಡಿಎಸ್‌ನ ಮಲ್ಲೇಶ್ ಬಾಬು ಗೆಲುವು ಸಾಧಿಸಿದ್ದಾರೆ.
ಕಾಂಗ್ರೆಸ್‌ನ ಕೆ. ಗೌತಮ್ ಕುಮಾರ್ ಸೋಲು ಕಾಣುವ ಮೂಲಕ ಕಾಂಗ್ರೆಸ್‌ಗೆ ರಾಜ್ಯದಲ್ಲಿ ಮೊದಲ ಸೋಲಾಗಿದೆ. ಕಾಂಗ್ರೆಸ್‌ನೊಳಗೆ ಇದ್ದ ಭಿನ್ನಮತ ಜೆಡಿಎಸ್‌ನ ಗೆಲುವಿಗೆ ಸಹಕಾರಿಯಾಗಿದೆ ಎಂದು ಹೇಳಲಾಗುತ್ತಿ.
ಕೆ.ಎಚ್.ಮುನಿಯಪ್ಪ, ರಮೇಶ್ ಕುಮಾರ್ ಸೇರಿದಂತೆ ಅನೇಕ ನಾಯಕರಲ್ಲಿ ಹೊಂದಾಣಿಕೆ ಇರಲಿಲ್ಲ. ಈ ಕಾರಣದಿಂದ ಕಾಂಗ್ರೆಸ್ ಸೋಲು ಕಂಡಿದೆ ಎನ್ನಬಹುದು. ಇನ್ನು ಜೆಡಿಎಸ್ ಜತೆಗೆ ಬಿಜೆಪಿ ಕೈಜೋಡಿಸಿದ ಪರಿಣಾಮ ಕೋಲಾರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನೇತೃತ್ವದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

