ಟಿ 20 ವಿಶ್ವ ಕಪ್ ಬಳಿಕ ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ 20 ಆವೃತ್ತಿಗೆ ವಿದಾಯ ಹೇಳಿದ್ದಾರೆ. ಇದೇ ಬೆನ್ನಲ್ಲೇ ಟೀಮ್ ಇಂಡಿಯಾದ ಮಾಜಿ ಬ್ಯಾಟ್ಸ್ ಮ್ಯಾನ್, ಮಿಸ್ಟರ್ ಐಪಿಎಲ್ ಎಂದೇ ಖ್ಯಾತಿ ಪಡೆಸಿರುವ ಸುರೇಶ್ ರೈನಾ ಜರ್ಸಿ ನಂಬರ್ 18 ಮತ್ತು 45 ಕ್ಕೆ ವಿದಾಯ ಘೋಷಿಸಿ ಎಂದು ಬಿಸಿಸಿಐ ನಲ್ಲಿ ಮನವಿ ಮಾಡಿದ್ದಾರೆ.
ಈಗಾಗಲೇ ಕ್ರಿಕೆಟ್ ದೇವರಾದ ಸಚಿನ್ ತೆಂಡೂಲ್ಕರ್ ಅವರ ಜೆರ್ಸಿ ನಂಬರ್ 10 ಹಾಗೂ ಮಹೇಂದ್ರ ಸಿಂಗ್ ಧೋನಿಯವರ ಜೆರ್ಸಿ ನಂಬರ್ 7 ಎರಡಕ್ಕೂ ಬಿಸಿಸಿಐ ನಿವೃತ್ತಿ ಘೋಷಣೆ ಮಾಡಿದೆ. ಇನ್ನೂ ಮುಂದೆ ಯಾವ ಆಟಗಾರನೂ ಸಹ ಇವೆರಡು ಜೆರ್ಸಿ ನಂಬರ್ ಅನ್ನು ಬಳಸುವಂತಿಲ್ಲ ಎಂದು ಹೇಳಿದೆ.
ಅದೇ ರೀತಿ ವಿರಾಟ್ ಕೊಹ್ಲಿ ಜೆರ್ಸಿ ನಂಬರ್ 18 ಹಾಗೂ ರೋಹಿತ್ ಶರ್ಮಾರ ಜೆರ್ಸಿ ನಂಬರ್ 45 ಕ್ಕೆ ವಿದಾಯ ಘೋಷಿಸಿ. ಇನ್ನೂ ಮುಂದೆ ಈ ನಂಬರ್ ಗಳನ್ನು ಯಾವ ಮುಂಬರುವ ಆಟಗಾರರು ಬಳಸಲು ಅನುಮತಿ ನೀಡಬೀಡಿ ಎಂದು ಮಾಜಿ ಕ್ರಿಕೆಟಿಗ ಸುರೇಶ ರೈನಾ ತಿಳಿಸಿದ್ದಾರೆ.
ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಇನ್ನೂ ಏಕದಿನ ಮತ್ತು ಟೆಸ್ಟ್ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿಲ್ಲ, ಆದರೂ ಈ ಕೆಲಸವನ್ನು ಈಗಲೇ ಮಾಡಿದರೆ ಸೂಕ್ತ ಎಂದು ಬಿಸಿಸಿಐ ಬಳಿ ಮನವಿ ಮಾಡಿದ್ದಾರೆ .