ಬೆಂಗಳೂರು : ಒಳ್ಳೆಯ ಸರ್ಕಾರಿ ಕೆಲಸ ಹುಡುಕುತ್ತಿದ್ದೀರಾ ಆಗಿದ್ರೆ ಇಲ್ಲಿದೆ ನೋಡಿ ಬಂಪರ್ ಆಫರ್. ಕೆಎಸ್ಆರ್ಟಿಸಿ ವತಿಯಿಂದ ಬರೋಬ್ಬರಿ 13 ಸಾವಿರ ಮಂದಿ ಚಾಲಕರನ್ನು ನೇಮಕ ಮಾಡಿಕೊಳ್ಳುವಂತೆ ಆದೇಶ ಹೊರಡಿಸಿದೆ. 7 ನೆಯ ತರಗತಿಯನ್ನು ಪಾಸ್ ಆಗಿದ್ರೆ ಸಾಕು ಅರ್ಜಿಯನ್ನು ಸಲ್ಲಿಸಬಹುದು. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಉದ್ಯೋಗದ ಸ್ಥಳ.
ಹೊರ ಗುತ್ತಿಗೆ ಆಧಾರದ ಮೇಲೆ ಆಯ್ಕೆ. ರಾಮನಗರ, ಆನೇಕಲ್ ತಾಲ್ಲೂಕಿನ ಡಿಪೋಗಳಲ್ಲಿ , ಚಾಮರಾಜ ನಗರ ಡಿಪೋದಲ್ಲಿ .
ವಿದ್ಯಾರ್ಹತೆ ಹಾಗು ವೇತನ
7 ನೆಯ ತರಗತಿ ಪಾಸ್ ಆಗಿರಬೇಕು ಹೆವಿ ಡ್ರೈವಿಂಗ್ ಲೈಸೆನ್ಸ್ ಅನ್ನು ಪಡೆದು 2 ವರ್ಷ ಅನುಭವ ವಿರುವವರಗೆ ಅವಕಾಶ. ಸರಕು ವಾಹನ ಬ್ಯಾಡ್ಜ್ ಕಡ್ಡಾಯ. 23,000 ವೇತನ ನೀಡಲಾಗುವುದು. ಸರ್ಕಾರದ ಸೌಲಭ್ಯಗಳು ಲಭ್ಯವಿರುತ್ತವೆ.
ಆಯ್ಕೆಯ ವಿಧಾನ
ಅಭ್ಯರ್ಥಿಗಳಿಗೆ ತರಬೇತಿ ನೀಡಿ ಬಳಿಕ ಸಂದರ್ಶನ ಹಾಗೂ ಟೆಸ್ಟ್ ಡ್ರೈವ್ ನೀಡಿ ದಾಖಲೆಗಳನ್ನು ಪರಿಶೀಲಿಸಿ ನೇಮಕ ಮಾಡಲಾಗಿದೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ಚಾಮರಾಜನಗರ ಜಿಲ್ಲೆ ಕೆಎಸ್‌ಆರ್‌ಟಿಸಿ ಡಿಪೋ ದೂರವಾಣಿ ಸಂಖ್ಯೆಗಳು: 8050980889, 8618876846, ರಾಮನಗರ ಹಾಗೂ ಆನೇಕಲ್ ತಾಲೂಕು ಕೆಎಸ್‌ಆರ್‌ಟಿಸಿ ಬಸ್ ಡಿಪೋ ದೂರವಾಣಿ ಸಂಖ್ಯೆಗಳು: 8050980889, 8618876846ಕ್ಕೆ ಕರೆ ಮಾಡಿ.