ಸರ್ಬಿಯಾದ ನೊವಾಕ್ ಜೊಕೊವಿಕ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಟೆನಿಸ್ ವಿಭಾಗದ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಇಂದು 9ನೇ ಒಲಿಂಪಿಕ್ಸ್ ದಿನದಲ್ಲಿ ನಡೆದ ಟೆನ್ನಿಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಸ್ಪೇನ್ ದೇಶದ ಕಾರ್ಲೊಸ್ ಅಲ್ಕರಾಜ್ ಅವರನ್ನು 7-6, 7-6 ನೇರ ಸೆಟ್‌ಗಳಲ್ಲಿ ಸೋಲಿಸಿದ ಸರ್ಬಿಯಾದ ನೊವಾಕ್ ಜೊಕೊವಿಕ್ ಒಲಿಂಪಿಕ್ಸ್ ಕ್ರೀಡಾಕೂಟದ ಟೆನ್ನಿಸ್ ವಿಭಾಗದ ಚಿನ್ನದ ಪದಕ ಗೆದ್ದರು.
ಸದ್ಯ ಎಟಿಪಿ ರ್ಯಾಂಕಿನಲ್ಲಿ ನಂ.1 ಸ್ಥಾನದಲ್ಲಿರುವ ಜೊಕೊವಿಕ್ ಕೊಂಚ ಪ್ರಯಾಸ ಪಟ್ಟು ಫೈನಲ್ ಪಂದ್ಯದಲ್ಲಿ ಗೆದ್ದು ಚಿನ್ನದ ಪದಕ ಗಳಿಸಿದರು.