ಅಪರಾಧ ಸುದ್ದಿ

ನಟಿ ಹೇಮಾಗೆ ಜೂನ್ 1 ರ “ಡೆಡ್‌ಲೈನ್”

Share It

ಬೆಂಗಳೂರು: ಬೆಂಗಳೂರು ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಸೇವನೆ ಆರೋಪದಲ್ಲಿ ಭಾಗಿಯಾಗಿರುವ ನಟಿಯರಿಗೆ ಜೂನ್ ೧ ರಂದು ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ನೊಟೀಸ್ ನೀಡಿದೆ.

ಮೇ. ೨೪ರಂದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದ ಪಾರ್ಟಿಯೊಂದರಲ್ಲಿ ಡ್ರಗ್ಸ್ ಸೇವನೆ ಮಾಡಿದ್ದಾರೆ ಎಂಬ ಆರೋಪದಲ್ಲಿ ತೆಲುಗು ನಟಿ ಹೇಮಾ ಸೇರಿದಂತೆ 102 ಜನರಿಗೆ ನೊಟೀಸ್ ನೀಡಲಾಗಿತ್ತು. ಇದರಲ್ಲಿ 86 ಜನ ಡ್ರಗ್ಸ್ ಸೇವನೆ ಮಾಡಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಪೊಲೀಸರು, ಇವರಿಗೆಲ್ಲ ನೊಟೀಸ್ ನೀಡಿ ವಿಚಾರಣೆ ನಡೆಸುತ್ತಿದ್ದಾರೆ.

ಆದರೆ, ತೆಲುಗು ನಟಿ ಹೇಮಾ ಸೇರಿದಂತೆ ಎಂಟು ಜನ ಎಸ್‌ಐಟಿ ನೀಡಿದ್ದ ಮೊದಲ ನೊಟೀಸ್‌ಗೆ ಉತ್ತರಿಸಿ, ವಿಚಾರಣೆಗೆ ಹಾಜರಾಗಿರಲಿಲ್ಲ. ಅದಕ್ಕಾಗಿ ಎಸ್‌ಐಟಿ ಇದೀಗ ಎರಡನೇ ನೊಟೀಸ್ ನೀಡಿದ್ದು, ಜೂನ್ ೧ ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಅಂದು ವಿಚಾರಣೆಗೆ ಆಕೆ ಹಾಜರಾಗದಿದ್ದರೆ, ಎಸ್‌ಐಟಿ ಬಂಧನಕ್ಕೆ ಸಿದ್ಧತೆ ಮಾಡಿಕೊಳ್ಳುವ ಸಾಧ್ಯತೆಯಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಪಾರ್ಟಿ ಆಯೋಜಕರು, ಪಾರ್ಟಿಗೆ ಡ್ರಗ್ಸ್ ಸಪ್ಲೇ ಮಾಡಿದ್ದ ಪೆಡ್ಲರ್‌ಗಳು, ಹೀಗೆ ಅನೇಕರನ್ನು ಎಸ್‌ಐಟಿ ಬಂಧಿಸಿ ವಿಚಾರಣೆ ನಡೆಸುತ್ತಿದೆ. ನಗರದ ಹೊರವಲಯದಲ್ಲಿ ಡ್ರಗ್ಸ್ ಪಾರ್ಟಿ ಮಾಡುವ ಮೂಲಕ ನಗರದ ಮಾನ ಹರಾಜಾಕುವವರ ವಿರುದ್ಧ ಸಿಸಿಬಿ ಪೊಲೀಸರು ಸಮರ ಸಾರಿದ್ದು, ಇದು ಅನೇಕ ನಟನಟಿಯರಿಗೆ ಉರುಳಾಗುವ ಸಾಧ್ಯತೆಯಿದೆ.


Share It

You cannot copy content of this page