ಅಪರಾಧ ಸುದ್ದಿ

ಕಲಬುರಗಿ: 48 ನಿಮಿಷ, ಎಟಿಎಂನಿಂದ 18 ಲಕ್ಷ ರೂ. ದರೋಡೆ

Share It

ಕಲಬುರಗಿ:ಬೀದರ್‌ನಲ್ಲಿ ಗುಂಡಿನ ದಾಳಿ ನಡೆಸಿ ಎಟಿಎಂ ವಾಹನದಲ್ಲಿದ್ದ ಹಣ ದೋಚಿದ ಪ್ರಕರಣದ ನೆನಪು ಇನ್ನು ಇರುವಾಗಲೇ ರಾಜ್ಯದಲ್ಲಿ ಮತ್ತೊಂದು ಎಟಿಎಂ ದರೋಡೆ ಪ್ರಕರಣ ಕಲಬುರಗಿಯಲ್ಲಿ ನಡೆದಿದೆ. ಬೇರೆ ರಾಜ್ಯದ ದರೋಡೆಕೋರರ ತಂಡ ಈ ಕೃತ್ಯವನ್ನು ಮಾಡಿರಬಹುದು ಎಂದು ಅಂದಾಜಿಸಲಾಗಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ಕದ್ದೊಯ್ದಿರುವ ಘಟನೆ ಕಲಬುರಗಿ ( ಪೂಜಾರಿ ಚೌಕ್‌ನಲ್ಲಿ ನಡೆದಿದೆ. ಗುರುತು ಸಿಗಬಾರದು ಎಂದು ಕಿರಾತಕರು ಮೊದಲಿಗೆ ಸಿಸಿಕ್ಯಾಮರಾಗೆ ಬ್ಲ್ಯಾಕ್‌ ಸ್ಪ್ರೇ ಮಾಡಿ ಬಳಿಕ ಎಟಿಎಂ ಲಾಕರ್ ಕಟ್ ಮಾಡಿ ಬರೋಬ್ಬರಿ 18 ಲಕ್ಷ ರೂ. ಹಣ ದೋಚಿಕೊಂಡು ಪರಾರಿಯಾಗಿದ್ದಾರೆ.

ಏಪ್ರಿಲ್ 9ರ ನಸುಕಿನ ಜಾವ 3 ಗಂಟೆ ಸುಮಾರಿಗೆ ಹರಿಯಾಣದ ಮೂಲದ ಗ್ಯಾಂಗ್ ಎಟಿಎಂಗೆ ನುಗ್ಗಿದೆ. ಮೊದಲಿಗೆ ಸಿಸಿಕ್ಯಾಮರಾಗೆ ಸ್ಪ್ರೇ ಮಾಡಿದ್ದಾರೆ. ಬಳಿಕ ಲಾಕರ್‌ ಅನ್ನ ಗ್ಯಾಸ್ ಕಟರ್‌ನಿಂದ ಕಟ್ ಮಾಡಿ ಬರೋಬ್ಬರಿ 18 ಲಕ್ಷ ರೂಪಾಯಿ ದೋಚಿದ್ದಾರೆ.

ಮೊದಲಿಗೆ ತಡರಾತ್ರಿ 2.18ಕ್ಕೆ ಕಾರೊಂದು ಪಾಸ್ ಆಗಿದೆ. ಅದಾಗಿ 48 ನಿಮಿಷದಲ್ಲೇ ಎಟಿಎಂ ಕಳ್ಳತನವಾಗಿದೆ. ಹೀಗಾಗಿ ಇದೇ ಕಾರಿನಲ್ಲಿ ಖದೀಮರು ಬಂದಿರುವ ಶಂಕೆ ವ್ಯಕ್ತವಾಗಿದೆ. ಎಟಿಎಂನಲ್ಲಿ ಸೆಕ್ಯೂರಿಟಿ ಗಾರ್ಡ್ ಇಲ್ಲದ್ದನ್ನ ಗಮನಿಸಿ ಎಟಿಎಂಗೆ ನುಗ್ಗಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ಪೊಲೀಸರು ಕಾರಿನ ನಂಬರ್ ಟ್ರೇಸ್ ಮಾಡುತ್ತಿದ್ದಾರೆ.

ಕಲಬುರಗಿ ನಗರದ ಸಬ್ ಅರ್ಬನ್ ಪೊಲೀಸ್ ಠಾಣಾ ವ್ಯಾಪ್ತಿಯ ಪೂಜಾರಿ ಚೌಕ್ ಹತ್ತಿರ ಇರುವ ಎಸ್‌ಬಿಐ ಬ್ಯಾಂಕ್ ಎಟಿಎಂನಲ್ಲಿ ಈ ದರೋಡೆ ನಡೆದಿದೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್. ಡಿ. ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Share It

You cannot copy content of this page