ಕೋರಮಂಗಲದ ಹೋಟೆಲ್ ವಿರುದ್ಧ ಕನ್ನಡಿಗರ ಆಕ್ರೋಶ
ಬೆಂಗಳೂರು: ಹೋಟೆಲ್ ಸೈನ್ ಬೋರ್ಡ್ ನಲ್ಲಿ ಕನ್ನಡಿಗರನ್ನು ಹಿಂದಿ ಭಾಷೆಯ ಅವಾಚ್ಯ ಶಬ್ದ ಬಳಸಿ ನಿಂದಿಸಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಕನ್ನಡಪರ ಹೋರಾಟಗಾರರು ಒತ್ತಾಯಿಸಿದ್ದಾರೆ.
ಕೋರಮಂಗಲದ ಜಿ.ಎಸ್. ಸೂಟ್ಸ್ ಎಂಬ ಹೋಟೆಲ್ ನಲ್ಲಿ ಏಪ್ರಿಲ್ 16, ಶುಕ್ರವಾರ ರಾತ್ರಿ ಡಿಜಿಟಲ್ ಸೈನ್ ಬೋರ್ಡ್ ನಲ್ಲಿ ಕನ್ನಡಿಗ ಮಾದರ್ *ದ್ ಎಂದು ಡಿಸ್‌ಪ್ಲೇ ಮಾಡಲಾಗಿತ್ತು. ಇದು ಬೇಕಂತಲೇ ಮಾಡಿದ್ದ ಕೆಲಸವಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರಿಂದ ಕನ್ನಡಿಗರು ಕೆರಳಿದ್ದು, ಬೆಂಗಳೂರು ನಗರ ಪೊಲೀಸರಿಗೆ ದೂರು ನೀಡಿದ್ದಲ್ಲದೆ, ಬೆಳಗ್ಗೆಯೇ ಹೊಟೇಲ್ ಬಳಿ ತೆರಳಿ ಪ್ರತಿಭಟನೆ ನಡೆಸಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ಡಿಜಿಟಲ್ ಸೈನ್ ಬೋರ್ಡ್ ತೆರವುಗೊಳಿಸಿದ್ದು, ಆ ಪದವನ್ನು ಬೋರ್ಡ್ ನಕ್ಲಿ ಪ್ಲೇ ಮಾಡಿದ ಉತ್ತರ ಭಾರತದ ಕಿಡಿಗೇಡಿಯನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಕನ್ನಡಿಗರು ಒತ್ತಾಯಿಸಿದ್ದಾರೆ.