ಅಪರಾಧ ಸುದ್ದಿ

ಕೆನಡಾ ದೇಶದಲ್ಲಿ ಕನ್ನಡಿಗನ ಕಗ್ಗೊಲೆ : ಗುಂಡಿನ ದಾಳಿ ನಡೆಸಿ ಕೊಲೆಗೈದ ಹಂತಕರು

Share It

ನೆಲಮಂಗಲ: ಕೆನಡಾ ದೇಶದಲ್ಲಿ ದುಷ್ಕರ್ಮಿಗಳ ಗುಂಡಿನ ದಾಳಿಗೆ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ನಿವಾಸಿ ಚಂದನ್ ಕುಮಾರ್ ಹತ್ಯೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಕೆನಡಾದಲ್ಲಿ ಕಳೆದ ಆರು ವರ್ಷದಿಂದ ವಾಸವಿದ್ದ ಚಂದನ್ ಕುಮಾರ್ ಮೇಲೆ ಕಾರಿನಲ್ಲಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.. ಇದರಿಂದಾಗಿ 37 ವರ್ಷದ ಚಂದನ್ ಕುಮಾರ್ ಮೃತಪಟ್ಟಿದ್ದಾರೆ.

ಹಂತಕರು ಹತ್ತಾರು ಬಾರಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಚಂದನ್ ಕುಮಾರ್ ಕೆನಡಾದಲ್ಲಿ ನೆಲೆಸಿದ್ದರು. ಅವರ ಪೋಷಕರು ತ್ಯಾಮಗೊಂಡ್ಲುವಿನಲ್ಲಿದ್ದು, ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.


Share It

You cannot copy content of this page