ಬೆಂಗಳೂರು: ಕರಗ ಉತ್ಸವದ ಬಿಲ್‌ಗಳನ್ನು ಬಾಕಿಯಿಟ್ಟುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಜರಾಯಿ ಇಲಾಖೆ ಇಒ ನಾಗರಾಜ್ ಅವರನ್ನು ಅಮಾನತು ಮಾಡಲಾಗಿದೆ.
ಬಾಕಿ ಬಿಲ್ ಗಳನ್ನು ಪಾವತಿ ಮಾಡಲು 2 ಲಕ್ಷ ರು.ಗಳನ್ನು ನೀಡುವಂತೆ ಬೇಡಿಕೆಯಿಟ್ಟಿದ್ದರು. ಹೀಗಾಗಿ, ಲೈಟಿಂಗ್ಸ್, ಹೂವಿನ ವ್ಯಾಪಾರಿಗಳ ಬಿಲ್ ಇನ್ನೂ ಬಿಡುಗೆಯಾಗಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಿ ಮುಜರಾಯಿ ಇಲಾಖೆ ಆಯುಕ್ತ ಆಯುಕ್ತ ಶರತ್ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಆಯುಕ್ತರು ಮಾಹಿತಿ ನೀಡಿದ್ದು, ದೇಗುಲದಲ್ಲಿ ನಡೆದಿರುವ ಅವ್ಯವಹಾರ ಮತ್ತು ಲಂಚಕ್ಕೆ ಬೇಡಿಕೆ ಸಂಬಂಧ ಅವರನ್ನು ಅಮಾನತು ಮಾಡಿದ್ದು, ತನಿಖೆ ನಡೆಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಬಿಲ್ ಪಾವತಿ ಬಾಕಿಯಿದ್ದರೆ, ಅದನ್ನು ಪರಿಶೀಲಿಸಿ ಬಿಡುಗಡೆ ಮಾಡಲು ಕ್ರಮವಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

