ಶಿವಮೊಗ್ಗ : ಬೆಂಗಳೂರಿನ ಅಂಬೇಡ್ಕರ್ ಭವನ, ರೆಡ್ ಕಾರ್ಪೆಟ್ ವೇದಿಕೆಯಲ್ಲಿ ಕರ್ನಾಟಕದ ಪ್ರತಿಷ್ಟಿತ ಜೀ ಕನ್ನಡ ನ್ಯೂಸ್ ವಾಹಿನಿ ಮತ್ತು ಎನಿಹೆಲ್ಪ್ ಗ್ರೂಪ್ ಬೆಂಗಳೂರು ಸಂಸ್ಥೆ ಶಿವಮೊಗ್ಗದ ಸ್ಟೈಲ್ ಡಾನ್ಸ್ ಕ್ರಿವ್ ನೃತ್ಯ ಸಂಸ್ಥೆಗೆ ಕರ್ನಾಟಕದ ಟಾಪ್ ಕಲ್ಚರಲ್ ಡಾನ್ಸ್ ಎಜುಕೇಷನ್ ಇನ್ಟಿಟ್ಯೂಟ್ ಸಂಸ್ಥೆ” ಎಂದು ಬಿರುದು ನೀಡಿ ನೃತ್ಯ ಸಂಸ್ಥೆಯ ಸಂಸ್ಥಾಪಕ ಶಶಿಕುಮಾರ್ ಎನ್ ಅವರಿಗೆ “ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿ” ನೀಡಿ ಗೌರವಿಸಿದೆ.
ಕಾರ್ಯಕ್ರಮದಲ್ಲಿ ಸಿದ್ದಗಂಗಾ ಮಠದ ಮಲಯ ಡಾ.ಶಾಂತಮುನಿ ಸ್ವಾಮಿಗಳು, ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ , ಕನ್ನಡಪರ ಹೋರಾಟಗಾರ ಮತ್ತು ಬಿಗ್ ಬಾಸ್ ಖ್ಯಾತಿಯ ರೂಪೇಶ್ ರಾಜಣ್ಣ, ಸ್ಯಾಂಡಲ್ ವುಡ್ ತಾರೆ ರಾಗಿಣಿ, ಬೆಂಗಳೂರು ಗ್ರಾಮೀಣ ಭಾಗದ ಶಾಸಕರು ರಿಜ್ವಾನ್ ಹರ್ಷದ್ ಸೇರಿದಂತೆ ಮತ್ತಿತರರಿದ್ದರು.

