ಉಪಯುಕ್ತ ಸುದ್ದಿ

ಕಬಾಬ್ ಬಳಕೆಗೆ ಕೃತಕ ಕಲರ್:ಸರಕಾರದ ಖಡಕ್ ಆದೇಶ

Share It

ಬೆಂಗಳೂರು: ಇನ್ನು ಮುಂದೆ ಕಲರ್ ಕಲರ್ ಕಬಾಬ್ ಕೊಟ್ಟರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಅವಕಾಶವಿದೆ. ಕಲರ್ ಇಲ್ಲದೆ ಆರೋಗ್ಯಕರ ಕಬಾಬ್ ಮಾಡುವುದು ಇನ್ನು ಮುಂದೆ ಕಟ್ಟುನಿಟ್ಟಿನ ಕ್ರಮವಾಗಿದೆ.

ನಿಯಮಬಾಹಿರವಾಗಿ ಕಬಾಬ್ ಗೆ ಕಲರ್ ಬಳಕೆ ಮಾಡಿದರೆ, 10 ಲಕ್ಷ ರುಪಾಯಿ ದಂಡ ಮತ್ತು ಏಳು ವರ್ಷದಿಂದ ಜೀವಾವಧಿ ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ಬಂದಿದೆ. ಹೀಗಾಗಿ, ಈ ನಿಯಮ ಪಾಲನೆ ಮಾಡುವುದು ಇನ್ನು ಮುಂದೆ ಕಡ್ಡಾಯವಾಗಲಿದೆ.

ಕರ್ನಾಟಕ ಪುಡ್ ಸೇಫ್ಟಿ ಆಕ್ಟ್ 2006 ರ ಪ್ರಕಾರ ಆಹಾರದಲ್ಲಿ ಕೃತಕ ಬಣ್ಣ ಬಳಕೆ ಮಾಡುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ರಾಜ್ಯಾದ್ಯಂತ ಕಾಬಾಬ್ ಗೆ ಬಳಕೆ ಮಾಡುವ 39 ಕೃತಕ ಬಣ್ಣಗಳ ಮಾದರಿ ಸಂಗ್ರಹಿಸಿ ಪರಿಶೀಲನೆ ಮಾಡಲಾಗಿತ್ತು.

ಇದರಲ್ಲಿ ಎಂಟು ಮಾದರಿಗಳು ಅಪಾಯಕಾರಿ ಅಂಶಗಳನ್ನು ಹೊಂದಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮಹತ್ವದ ಆದೇಶ ಹೊರಡಿಸಿದೆ. ನಿಯಮ ಉಲ್ಲಂಘನೆಗೆ ಕಠಿಣ ಶಿಕ್ಷೆ ವಿಧಿಸುವ ಕ್ರಮಕ್ಕೆ ಮುಂದಾಗಿದೆ.


Share It

You cannot copy content of this page