ಬೆಂಗಳೂರು: ಗೆಜೆಟೆಡ್ ಪ್ರೊಬೇಷನರ್ಸ್ ಗ್ರೂಪ್”ಎ” ಮತ್ತು”ಬಿ” ವೃಂದದ 2023 ಮತ್ತು 24 ನೆಯ ಸಾಲಿನ
384 ಹುದ್ದೆಗಳಿಗೆ ಪೂರ್ವ ಭಾವಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಈ ಮೊದಲು ಪರೀಕ್ಷೆಯನ್ನು ಆ. 25 ಕ್ಕೆ ನಿಗದಿ ಮಾಡಲಾಗಿತ್ತು.
ಆದರೆ ಇದೇ ದಿನಾಂಕದಂದು ಬ್ಯಾಂಕಿಂಗ್ ಪರೀಕ್ಷೆ ಇರುವುದರಿಂದ ಅಭ್ಯರ್ಥಿಗಳ ಒತ್ತಾಯದ ಮೇರೆಗೆ ಸಮಸ್ಯೆಯಾಗಬಾರದು ಎಂದು ಪರೀಕ್ಷೆ ಮುಂದೂಡಲಾಗಿದೆ. ಸದ್ಯ ಕೆಪಿಎಸ್ಸಿ ಎರಡು ದಿನಗಳ ಅವಧಿಗೆ ಕೆಎಎಸ್ ಪರೀಕ್ಷೆಯನ್ನು ಮುಂದೂಡಿದೆ.
ಕೆಎಎಸ್ ಪೂರ್ವ ಭಾವಿ ಪರೀಕ್ಷೆಗೆ ಎಲ್ಲಾ ತಯಾರಿಗಳನ್ನು ಮಾಡಿಕೊಂಡು ಮುಖ್ಯಮಂತ್ರಿ ಹಾಗೂ ಆಯೋಗದೊಂದಿಗೆ ಚರ್ಚೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ. ಆ.28 ಕ್ಕೆ ಪರೀಕ್ಷೆ ಗೆ ಅವಕಾಶ ನೀಡಲಾಗಿದೆ ಎಂದು ಕೆಪಿಎಸ್ಸಿ ತಿಳಿಸಿದೆ. ಪರೀಕ್ಷೆಗೆ 562 ಪರೀಕ್ಷಾ ಕೇಂದ್ರಗಳನ್ನು ಸಿದ್ಧ ಪಡಿಸಿದೆ. ಅಭ್ಯರ್ಥಿಗಳಿಗೆ ಒಪ್ಪಿಗೆ ಪತ್ರವನ್ನು ನೀಡಿತ್ತು.
ಆಗಸ್ಟ್ 27 ಕಾರ್ಯ ನಿರ್ವಾಹಕ ದಿನವಾಗಿದ್ದರಿಂದ ಪರೀಕ್ಷೆ ಬರೆಯಲು ನಿಗದಿ ಪಡಿಸಿರುವ ಕೇಂದ್ರಗಳಿಗೆ ಒಂದು ದಿನ ಸಾರ್ವತ್ರಿಕ ರಜೆಯನ್ನು ನೀಡಬೇಕು ಹಾಗೂ ಸೇವಾ ನಿತರ ಅಭ್ಯರ್ಥಿಗಳಿಗೆ ರಜೆ ನೀಡಬೇಕು ಎಂದು ಕೋರಿ ಕೆಪಿಎಸ್ಸಿ ಕಾರ್ಯದರ್ಶಿ ರಾಕೇಶ್ ಕುಮಾರ್ ಆಡಳಿತಾಧಿಕಾರಿಗೆ ಮನವಿ ಮಾಡಿದ್ದಾರೆ.