ಬೆಂಗಳೂರು: ಇದು ದರ್ಶನ್ ಸಿನಿಮಾದ ಟೈಟಲ್ ಅಲ್ಲ, ರೇಣುಕಾ ಸ್ವಾಮಿ ಕೊಲೆ ಕೇಸಲ್ಲಿ ಬಂಧಿತರಾಗಿರುವ ನಟ ದರ್ಶನ್ ಗೆ ಜೈಲಲ್ಲಿ ಕೊಟ್ಟಿರುವ ನಂಬರ್ ಇದು.
ರೇಣುಕಾ ಸ್ವಾಮಿ ಕೊಲೆ ಕೇಸಲ್ಲಿ ಬಂಧಿತರಾಗಿದ್ದಲ್ಲ ಎಲ್ಲ ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ದರ್ಶನ್ ಸೇರಿ ನಾಲ್ಕು ಜನರನ್ನು ಹೊರತುಪಡಿಸಿ ಪವಿತ್ರಾ ಗೌಡ ಮತ್ತು ಉಳಿದ ಆರೋಪಿಗಳು ಜೈಲು ಸೇರಿದ್ದರು. ದರ್ಶನ್ ಮತ್ತು ನಾಲ್ವರನ್ನು ನೆನ್ನೆ ಪರಪ್ಪನ ಅಗ್ರಹಾರ ಜೈಲಿಗೆ ಸೇರಿಸಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರನ್ನು ಭದ್ರತಾ ಬ್ಯಾರಕ್ ನಲ್ಲಿ ಇಡಲಾಗಿದೆ. ಅವರ ಜತೆಗೆಒಬ್ಬ ಆರೋಪಿಯನ್ನಷ್ಟೇ ಜತೆಗಿಡಲಾಗಿದೆ. ಬಾತ್ ರೂಂ ಸೇರಿ ಕೆಲ ಮೂಲ ಸೌಲಭ್ಯ ಒದಗಿಸಲಾಗಿದೆ. ದರ್ಶನ್ ಜೈಲು ಸೇರಿದ ನಂತರ ಮೌನಕ್ಕೆ ಶರಣಾಗಿದ್ದಾರೆ.
