ಬೆಂಗಳೂರು: ಎತ್ತಿನ ಮೈ ತೊಳೆಯಲು ಹೋಗಿ ಯುವಕನೊಬ್ಬ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಗದಗ ಜಿಲ್ಲೆಯ ಹಾತಲಗೇರಿ ಗ್ರಾಮದಲ್ಲಿ ನಡೆದಿದೆ.
ಮೃತ ಯುಕನನ್ನು ಮುತ್ತಪ್ಪ ಮುರ್ಲಾಪುರ ಎಂದು ಗುರುತಿಸಲಾಗಿದ್ದು, ಹಸು ಮೈ ತೊಳೆಯುವ ಉದ್ದೇಶದಿಂದ ಕೆರೆಗೆ ಇಳಿದಿದ್ದ ಯುವಕ ಕಾಲುಜಾರಿ ಬಿದ್ದು, ಪ್ರಾಣ ಕಳೆದುಕೊಂಡಿದ್ದಾನೆ ಎನ್ನಲಾಗಿದೆ.
ಸ್ಥಳಕ್ಕೆ ಬೆಟಗೇರಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಶವದ ಹುಟುಕಾಟದಲ್ಲಿ ತೊಡಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕಾರ್ಯಾಚರಣೆ ನಡೆಸುತ್ತಿದ್ದಾರೆ.

