ಮಡಿಕೇರಿ: ಅರಣ್ಯದಲ್ಲಿ ಏಳು ತೇಗದ ಮರಗಳನ್ನು ಕಡಿದಿದ್ದ ಪ್ರಕರಣದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯೂ ಇರುವುದು ಗೊತ್ತಾಗಿದ್ದು, ಆರು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಡಿ.೮ ರಂದು ತೇಗದ ಮರ ಕಡಿದು ಅಲ್ಲೇ ಬಿಟ್ಟು ಕಳ್ಳರು ಪರಾರಿಯಾಗಿದ್ದರು. ಇದರು ಗೊತ್ತಾಗಿ, ಅರಣ್ಯ ಇಲಾಖೆ ಸಿಬ್ಬಂದಿ ನಾಲ್ಕು ದಿನ ಮರಗಳ್ಳರಿಗಾಗಿ ಕಾದಿದ್ದರು. ಡಿ ೧೨ರಂದು ಮಧ್ಯರಾತ್ರಿ ಅರಣ್ಯಕ್ಕೆ ಬಂದಿದ್ದ ಕಳ್ಳರು ಮರ ತುಂಬುವ ಪ್ರಯತ್ನ ನಡೆಸಿದ್ದರು.
ಈ ವೇಳೆ ಕಳ್ಳರೊಂದಿಗೆ ಘರ್ಷಣೆ ನಡೆದು, ಅರಣ್ಯಾಧಿಕಾರಿ ಚಂದ್ರಶೇಖರ್ ಎರಡು ಸುತ್ತು ಗುಂಡು ಹಾರಿಸಿದ್ದರು. ಈ ವೇಳೆ ಲೋಡರ್ ಸಂತೋಷ್ ಎಂಭಾತನೂ ಸೇರಿ ನಾಲ್ವರು ಆರೋಪಿಗಳನ್ನು ಸೆರೆಹಿಡಿಯಲಾಗಿತ್ತು. ವಿಚಾರಣೆ ವೇಳೆ ಮತ್ತೊಬ್ಬ ಸಿಬ್ಬಂದಿ ವಿನೋದ್ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ಸಂತೋಷ್ ಬಾಯಿಬಿಟ್ಟಿದ್ದ ಎನ್ನಲಾಗಿದೆ.
ಹೀಗಾಗಿ, ಆರ್‌ಆರ್‌ಟಿ ಸಿಬ್ಬಂದಿ ವಿನೋದ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈತ ಬೈಕ್‌ನಲ್ಲಿ ಓಡಾಡಿ ಮರಗಳ್ಳರಿಗೆ ಮಾಹಿತಿ ನೀಡುತ್ತಿದ್ದ ಎನ್ನಲಾಗಿದೆ. ಇಬ್ಬರು ಸಿಬ್ಬಂದಿ ಸೇರಿ ಒಟ್ಟು ಆರು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದ್ದು, ವಿನೋದ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಅರಣ್ಯ ಇಲಾಖೆ ಸಿಬ್ಬಂದಿ ಶೋzs ನಡೆಸಿದ್ದಾರೆ.

