ಲೋಕಸಭಾ ಚುನಾವಣೆಯಲ್ಲಿ ತಮ್ಮ ಸಹೋದರ ಡಿ.ಕೆ.ಸುರೇಶ್ ಸೋಲಿನ ನಂತರ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಎರಡೂ ಸ್ಥಾನಗಳಿಗೆ ಕುತ್ತು ಬಂದಿದೆ.
ಮುಸ್ಲಿಂ, ಹಿಂದುಳಿದ, ಲಿಂಗಾಯತ ಸಮುದಾಯಗಳ ಕೈ ನಾಯಕರು ಇದೀಗ ತಮಗೆ ಅದರ ಸಮುದಾಯದ ಆಧಾರದ ಮೇಲೆ ಡಿಸಿಎಂ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಮೇಲೆ ನಿರಂತರ ಒತ್ತಡ ಹೇರುತ್ತಿದ್ದಾರೆ.
ಮತ್ತೊಂದಡೆ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಅವರು ಡಿ.ಕೆ.ಶಿವಕುಮಾರ್ ಅವರ ಶೋಕಾಸ್ ನೋಟಿಸ್ ಎಚ್ಚರಿಕೆಗೂ ಹೆದರದೆ ತಮಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡುವುದಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಬದ್ಧ ಎಯ ಬಹಿರಂಗವಾಗೇ ಹೇಳಿದ್ದಾರೆ.
ಇದರ ಜೊತೆಗೆ ಸಚಿವರಾದ ಜಮೀರ್ ಅಹ್ಮದ್, ಸತೀಶ್ ಜಾರಕಿಹೊಳಿ ಸೇರಿದಂತೆ ಕೆಲವು ನಾಯಕರು ತಮಗೆ ಸಮುದಾಯದ ಆಧಾರದ ಮೇಲೆ ಡಿಸಿಎಂ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂದು ಹೇಳಿಕೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ‘ಕೆಲವರು ತಮ್ಮ ಬೇಡಿಕೆಗಳ ಈಡೇರಿಕೆಗೆ ಎಲ್ಲಿಗೆ ಹೋಗಬೇಕೊ ಅಲ್ಲಿಗೆ ಹೋಗಲಿ, ಸಮಯ ವ್ಯರ್ಥ ಮಾಡುವುದು ಬೇಡ. ಆದರೆ ಮಾಧ್ಯಮಗಳ ಮುಂದೆ ಈ ನಾಯಕರು ಹೋಗುವುದು ಬೇಡ ಎಂದು ಸಂದೇಶ ರವಾನಿಸಿದರು.