ಯಾದಗಿರಿ: ಲಿಂಗಸಗೂರು ಘಟಕದ ಕೆ.ಎಸ್.ಆರ್.ಟಿ.ಸಿ.ಬಸ್ ವೊಂದು ಲಿಂಗಸಗೂರನಿಂದ ಮುದ್ದೇಬಿಹಾಳ ಹೋಗುವಾಗ ನಾರಾಯಣಪುರ ಸಮೀಪ ಅಪಘಾತಕ್ಕೀಡಾಗಿದ್ದು, ಆಗಬಹುದಾಗಿದ್ದ ದೊಡ್ಡ ಅನಾಹುತವನ್ನು ಡ್ರೈವರ್ ಮೆಹಬೂಬ್ ತಪ್ಪಿಸಿದ್ದಾರೆ.
ಬಸ್‌ನಲ್ಲಿ ಸುಮಾರು 22 ಜನ ಪ್ರಯಾಣಿಕರಿದ್ದು, ಬಸ್‌ನ ಸ್ಟೆರಿಂಗ್ ಏಕಾಏಕಿ ಕಟ್ಟಾಗಿದ್ದು, ಚಾಲಕ ತಕ್ಷಣ ಬಲಕ್ಕೆ ಬಸ್ ತಿರುಗಿಸಿ ಭಾರಿ ಅನಾಹುತ ತಪ್ಪಿಸಿ ಎಲ್ಲರ ಪ್ರಾಣ ಉಳಿಸಿದ್ದಾರೆ ಎನ್ನಲಾಗಿದೆ. ಈ ಅಪಘಾತದಲ್ಲಿ ಪ್ರಾಣ ಹಾನಿ ಆಗದೆ ಇರೋದು ಅದೃಷ್ಟ ಎಂದು ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.
ಅಪಘಾತದಲ್ಲಿ ಕಂಡ್ಯಕ್ಟರ್ ಶಂಕರ್ ಗೌಡರಿಗೆ ಎಡ ಕಾಲಿನಲ್ಲಿ ಒಳಪೆಟ್ಟು ಹಾಗೂ ಒಬ್ಬ ಹಿರಿಯ ವ್ಯಕ್ತಿಯ ಎಡ ಕಣ್ಣಿನ ಮೇಲಭಾಗಕ್ಕೆ ಒಂದು ದೊಡ್ಡ ಗಾಯ ಆಗಿರೋದು ಬಿಟ್ರೆ ಏನು ಅನಾಹುತ ಆಗಿಲ್ಲಾ ಎಂದು ನಾರಾಯಣಪುರ ಠಾಣಾ ಪೋಲಿಸರು ತಿಳಿಸಿದ್ದಾರೆ. ಪ್ರಯಾಣಿಕರಿಗೆ ಬೇರೆ ಬಸ್‌ನ ವ್ಯವಸ್ಥೆ ಮಾಡಿ ಕಳಿಸಿಕೊಡಲಾಗಿದೆ.
ವರದಿಗಾರ : ಶಿವು ರಾಠೋಡ, ಯಾದಗಿರಿ

