ಉಪಯುಕ್ತ ಸುದ್ದಿ

SC ಅಭ್ಯರ್ಥಿಗಳಿಗೆ KSRTC ಸಿಹಿಸುದ್ದಿ: ಭಾರಿ ವಾಹನ ಚಾಲನಾ ತರಬೇತಿ ಹಾಗೂ ಉಚಿತ DL ವಿತರಣೆ

Share It

ಬೆಂಗಳೂರು: ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಉಚಿತ ಚಾಲನಾ ತರಬೇತಿ ಹಾಗೂ ಉಚಿತ ಚಾಲನಾ ಪರವಾನಗಿ ನೀಡಲು KSRTC ತೀರ್ಮಾನಿಸಿದೆ.

ಸಮಾಜ ಕಲ್ಯಾಣ ಇಲಾಖೆಯ ಪಿಎಂ-ಅಜಯ್ ಯೋಜನೆಯಡಿ ನಿಗಮದ ವ್ಯಾಪ್ತಿಯ ಮಾಲೂರು, ಮಳವಳ್ಳಿ, ಹಾಸನ, ಚಿಕ್ಕಮಗಳೂರು ಹಾಗೂ ಹೊಳಲ್ಕೆರೆ ತರಬೇತಿ ಕೇಂದ್ರಗಳಲ್ಲಿ ಉಚಿತ ಚಾಲನಾ ತರಬೇತಿ ಹಮ್ಮಿಕೊಳ್ಳಲಾಗಿದೆ.

ಉಚಿತ ಭಾರಿ ವಾಹನ ತರಬೇತಿ, ಉಚಿತ ಊಟ ಮತ್ತು ವಸತಿ, ಒಂದು ತಿಂಗಳು ಉಚಿತ ಪರವಾನಗಿ ನೀಡುವ ಮೂಲಕ ಸಾರಿಗೆ ಇಲಾಖೆಯ ಸಹಯೋಗದಲ್ಲಿ ಉಚಿತವಾಗಿ ಚಾಲನಾ ಪರವಾನಗಿಯನ್ನು ಉಚಿತವಾಗಿ ನೀಡಲಾಗುತ್ತಿದೆ.

ಅರ್ಹ ಅಭ್ಯರ್ಥಿಗಳು ಹತ್ತಿರದ ತರಬೇತಿ ಕೇಂದ್ರಗಳಲ್ಲಿ ನೇರವಾಗಿ ಅಥವಾ ksrtcjobs.karnataka.gov.in ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಈ ಕಚೇರಿಯಿಂದಲೇ ತಮ್ಮನ್ನು ಸಂಪರ್ಕಿಸಲಾಗುವುದು. ಹೆಚ್ಚಿನ ವಿವರಗಳಿಗೆ ಮಳವಳ್ಳಿ-7760990137, ಹಾಸನ- 7760990533, ಹೊಳಲ್ಕೆರೆ 7019072560,
ಮಾಲೂರು-7760994432, ಚಿಕ್ಕಮಗಳೂರು- 9606037746 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ನಿಗಮದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Share It

You cannot copy content of this page