ಉಪಯುಕ್ತ ಸುದ್ದಿ

ಹೊಸ ವರ್ಷಕ್ಕೆ KSRTC ಪ್ರಯಾಣಿಕರಿಗೆ ಖುಷಿ: ಹಲವು ಮಾರ್ಗಗಳಲ್ಲಿ ಬಸ್ ಟಿಕೆಟ್ ದರ ಕಡಿತ

Share It

ಬೆಂಗಳೂರು: ಹೊಸ ವರ್ಷದ ಆರಂಭದಲ್ಲೇ ರಾಜ್ಯದ ಬಸ್ ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ (KSRTC) ಸಂತಸದ ಸುದ್ದಿ ನೀಡಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಮಂಗಳೂರು ಹಾಗೂ ದಾವಣಗೆರೆ ವಿಭಾಗಗಳಲ್ಲಿ ಸಂಚರಿಸುವ ಹಲವಾರು ಮಾರ್ಗಗಳ ಬಸ್‌ಗಳ ಟಿಕೆಟ್ ದರವನ್ನು ಶೇಕಡಾ 10ರಿಂದ 15ರ ವರೆಗೆ ಇಳಿಕೆ ಮಾಡುವಂತೆ ನಿಗಮ ಆದೇಶ ಹೊರಡಿಸಿದೆ. ಈ ಪರಿಷ್ಕೃತ ದರಗಳು ಜನವರಿ 5ರಿಂದ ಜಾರಿಗೆ ಬರಲಿವೆ.

ಮಂಗಳೂರು ವಿಭಾಗದಿಂದ ಕುಂದಾಪುರ, ಉಡುಪಿ ಹಾಗೂ ಮಂಗಳೂರು–ಬೆಂಗಳೂರು ನಡುವಿನ ಎಲ್ಲ ರೀತಿಯ KSRTC ಬಸ್‌ಗಳಲ್ಲಿ ಕಡಿತ ದರ ಅನ್ವಯವಾಗಲಿದೆ. ಇದೇ ವೇಳೆ ದಾವಣಗೆರೆ ವಿಭಾಗದಲ್ಲೂ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಸಂಚರಿಸುವ ವೋಲ್ವೋ, ಇವಿ ಪವರ್ ಪ್ಲಸ್, ನಾನ್ ಎಸಿ ಸ್ಲೀಪರ್ ಬಸ್‌ಗಳ ಟಿಕೆಟ್ ದರವನ್ನು ಇಳಿಸಲಾಗಿದೆ.

ಅಂಬಾರಿ ಉತ್ಸವ ಬಸ್‌ಗಳ ಹೊಸ ದರಗಳು:

ಕುಂದಾಪುರ–ಬೆಂಗಳೂರು / ಬೆಂಗಳೂರು–ಕುಂದಾಪುರ: ₹1,510
ಉಡುಪಿ–ಬೆಂಗಳೂರು / ಬೆಂಗಳೂರು–ಉಡುಪಿ: ₹1,460
ಮಂಗಳೂರು–ಬೆಂಗಳೂರು / ಬೆಂಗಳೂರು–ಮಂಗಳೂರು: ₹1,350

ಡ್ರೀಮ್ ಕ್ಲಾಸ್ ಬಸ್‌ಗಳು:

ಕುಂದಾಪುರ–ಬೆಂಗಳೂರು: ₹1,350
ಉಡುಪಿ–ಬೆಂಗಳೂರು: ₹1,300
ಮಂಗಳೂರು–ಬೆಂಗಳೂರು: ₹1,200

ಮಲ್ಟಿ ಆಕ್ಸಿಲ್ 2.0 ಬಸ್‌ಗಳು:

ಕುಂದಾಪುರ–ಬೆಂಗಳೂರು: ₹1,310
ಉಡುಪಿ–ಬೆಂಗಳೂರು: ₹1,250
ಮಂಗಳೂರು–ಬೆಂಗಳೂರು: ₹1,150

ಮಲ್ಟಿ ಆಕ್ಸಿಲ್ ಬಸ್‌ಗಳು:

ಕುಂದಾಪುರ–ಬೆಂಗಳೂರು: ₹1,110
ಉಡುಪಿ–ಬೆಂಗಳೂರು: ₹1,060
ಮಂಗಳೂರು–ಬೆಂಗಳೂರು: ₹1,000

ನಾನ್ ಎಸಿ ಸ್ಲೀಪರ್ ಬಸ್‌ಗಳು:

ಕುಂದಾಪುರ–ಬೆಂಗಳೂರು: ₹1,050
ಉಡುಪಿ–ಬೆಂಗಳೂರು: ₹1,000
ಮಂಗಳೂರು–ಬೆಂಗಳೂರು: ₹900

ಪಲ್ಲಕ್ಕಿ ನಾನ್ ಎಸಿ ಸ್ಲೀಪರ್:

ಕುಂದಾಪುರ–ಬೆಂಗಳೂರು: ₹1,100 ಉಡುಪಿ–ಬೆಂಗಳೂರು: ₹1,060
ಮಂಗಳೂರು–ಬೆಂಗಳೂರು: ₹950

ರಾಜಹಂಸ ಬಸ್‌ಗಳ ದರ:

ಕುಂದಾಪುರ–ಬೆಂಗಳೂರು: ₹750
ಉಡುಪಿ–ಬೆಂಗಳೂರು: ₹700
ಮಂಗಳೂರು–ಬೆಂಗಳೂರು: ₹650

ಇದಲ್ಲದೆ, ದಾವಣಗೆರೆ ವಿಭಾಗದಿಂದ ಸಂಚರಿಸುವ ಬಸ್‌ಗಳಲ್ಲೂ ಟಿಕೆಟ್ ದರ ಕಡಿತವಾಗಿದೆ. ದಾವಣಗೆರೆ–ಬೆಂಗಳೂರು ಮಾರ್ಗದಲ್ಲಿ ವೋಲ್ವೋ ಬಸ್ ದರ ₹650, ಇವಿ ಪವರ್ ಪ್ಲಸ್ ಎಸಿ ಬಸ್ ₹600 ಹಾಗೂ ವೋಲ್ವೋ 2.0 ಬಸ್ ₹680 ಆಗಿದೆ. ದಾವಣಗೆರೆ–ಕಲಬುರಗಿ ನಾನ್ ಎಸಿ ಸ್ಲೀಪರ್ ಬಸ್ ದರವನ್ನು ₹1,005ಕ್ಕೆ ನಿಗದಿಪಡಿಸಲಾಗಿದ್ದು, ದಾವಣಗೆರೆ–ಹೈದರಾಬಾದ್ ನಾನ್ ಎಸಿ ಸ್ಲೀಪರ್ ಬಸ್‌ಗಳಿಗೆ ₹1,265 ರಿಯಾಯಿತಿ ದರ ಘೋಷಿಸಲಾಗಿದೆ.

ಪ್ರಯಾಣಿಕರಿಗೆ ಹೆಚ್ಚುವರಿ ಸೌಲಭ್ಯವಾಗಿ, ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಮಂದಿ ಒಟ್ಟಿಗೆ ಮುಂಗಡ ಬುಕ್ಕಿಂಗ್ ಮಾಡಿದರೆ ಶೇಕಡಾ 5 ರಿಯಾಯಿತಿ ಲಭ್ಯವಿದೆ. ಅಲ್ಲದೆ, ಒಂದು ಕಡೆ ಹಾಗೂ ಎರಡು ಕಡೆಯ ಪ್ರಯಾಣದ ಟಿಕೆಟ್‌ಗಳನ್ನು ಒಟ್ಟಿಗೆ ಬುಕ್ ಮಾಡಿದರೆ ಒಟ್ಟು ಪ್ರಯಾಣ ದರದಲ್ಲಿ ಶೇಕಡಾ 10 ರಿಯಾಯಿತಿ ನೀಡಲಾಗುತ್ತದೆ.


Share It

You cannot copy content of this page