ಬೆಂಗಳೂರು: KSRTC ನೌಕರರಿಗೆ ಸಿಹಿಸುದ್ದಿ ನೀಡಿರುವ ಇಲಾಖೆ ಅಂತರ್ ನಿಗಮಗಳ ವರ್ಗಾವಣೆಗೆ ಅರ್ಜಿ ಸಲ್ಲಿಸುವ ಅವಧಿಯನ್ನು ಫೆ.28 ರವರೆಗೆ ವಿಸ್ತರಿಸಿ ಆದೇಶ ಮಾಡಿದೆ.
ಇಲಾಖೆಯ ನೌಕರರ ಹಿತದೃಷ್ಟಿಯಿಂದ ದರ್ಜೆ-3 ಮೇಲ್ವಿಚಾರಕೇತರ ಹುದ್ದೆಗಳು ಹಾಗೂ ದರ್ಜೆ-4 ರ ನೌಕರರ ಪರಸ್ಪರ ವರ್ಗಾವಣೆ ಹಾಗೂ ಅಂತರ್ ನಿಗಮ ವರ್ಗಾವಣೆಗೆ ಜನವರಿ 1 2026 ರ ಬೆಳಗ್ಗೆ 11 ಗಂಟೆಯಿಂದ ಜನವರಿ31 ರವರೆಗೆ ಅವಕಾಶ ಕಲ್ಪಿಸಿತ್ತು. ಇದೀಗ ಸಿಬ್ಬಂದಿಯ ಹಿತದೃಷ್ಟಿಯಿಂದ ಇದನ್ನು ವಿಸ್ತರಣೆ ಮಾಡಲಾಗಿದೆ.
ಪ್ರಸ್ತುತ ಹೊರಡಿಸಿರುವ ಸುತ್ತೋಲೆಯ ಪ್ರಕಾರ ಅಂತರ್ ನಿಗಮ ಸಾಮಾನ್ಯ ಹಾಗೂ ಪರಸ್ಪರ ವರ್ಗಾವಣೆಯ ಆನ್ ಲೈನ್ ಅರ್ಜಿಯನ್ನು ಫೆ.28, 2026ರ ಸಂಜೆ 5.30ವರೆಗೆ ವಿಸ್ತರಣೆ ಮಾಡಲಾಗಿದೆ. ಸದರಿ ಅವಕಾಶವನ್ನು ಸಿಬ್ಬಂದಿ ಸದುಪಯೋಗ ಮಾಡಿಕೊಳ್ಳುವಂತೆ ನಿಗಮ ಸುತ್ತೋಲೆಯಲ್ಲಿ ತಿಳಿಸಿದೆ.

