ಉಪಯುಕ್ತ ಸುದ್ದಿ

ಕರ್ನಾಟಕ ಸಾರಿಗೆ ವ್ಯವಸ್ಥೆಗೆ ಸಂದಿವೆ 670 ಪ್ರಶಸ್ತಿಗಳು: ರಾಮಲಿಂಗಾ ರೆಡ್ಡಿ ಸಚಿವರಾಗಿದ್ದಾಗಲೇ 422 ಪ್ರಶಸ್ತಿ

Share It

ಬೆಂಗಳೂರು: ಭಾರತದಲ್ಲಿಯೇ ಅತ್ಯುತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಒಳಗೊಂಡಿರುವ ರಾಜ್ಯ ಕರ್ನಾಟಕ ಎಂಬುದು ಸಾರ್ವಕಾಲಿಕ ಸತ್ಯ. ಅದಕ್ಕೆ ಗರಿಯೆಂಬಂತೆ ನಾಲ್ಕು ನಿಗಮಗಳಿಗೆ ಈವರೆಗೆ 670 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.

ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ಲಂಡನ್ ನ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ಇಂಟರ್ನ್ಯಾಷನಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ಲಿಮ್ಕಾ ಬುಕ್ ಆಫ್ ರೆಕಾರ್ಡ್ ಸೇರಿದಂತೆ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಸಂಸ್ಥೆಗಳು ಈ ಪ್ರತಿಷ್ಠಿತ ಪ್ರಶಸ್ತಿಗಳನ್ನು ಸಾರಿಗೆ ಸಂಸ್ಥೆಗಳಿಗೆ ನೀಡಿವೆ.

ದೇಶದಲ್ಲಿಯೇ ಅತಿ ಹೆಚ್ಚು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದ ರಸ್ತೆ ಸಾರಿಗೆ ಸಂಸ್ಥೆ ಎಂಬ ವಿಶ್ವದಾಖಲೆಯನ್ನು ಕರ್ನಾಟಕ ಸಾರಿಗೆ ವ್ಯವಸ್ಥೆ ಪಡೆದುಕೊಂಡಿದೆ. ಶಕ್ತಿ ಯೋಜನೆಯ ಮೂಲಕ ಮಹಿಳೆಯರಿಗೆ 500 ಕೋಟಿ ರು.ಗಳ ಉಚಿತ ಟಿಕೆಟ್ ನೀಡಿರುವುದು ಕೂಡ ವಿಶ್ವದಾಖಲೆಯ ಪಟ್ಟಿಗೆ ಸೇರಿದೆ.

ರಾಮಲಿಂಗಾ ರೆಡ್ಡಿ ಅವರು ಸಚಿವರಾಗಿದ್ದ ಅವಧಿಯಲ್ಲಿಯೇ ಈ ಪ್ರಶಸ್ತಿಗಳ ಬಹುಪಾಲು ಸಂದಿರುವುದು ಅವರ ಕಾರ್ಯವೈಖರಿಗೆ ಕೈಗನ್ನಡಿಯಾಗಿದೆ. ಒಟ್ಟು 422 ಪ್ರಶಸ್ತಿಗಳು ಅವರ ಅವಧಿಯಲ್ಲಿಯೇ ಸಿಕ್ಕಿವೆ. ಮೊದಲ ಬಾರಿಗೆ ಅವರು ಸಚಿವರಾಗಿದ್ದ ಮೇ.2013 ರಿಂದ ಆಗಸ್ಟ್ 2017 ರ ಅವಧಿಯಲ್ಲಿ 201 ಪ್ರಶಸ್ತಿಗಳು, ಮೇ.2023 ರಿಂದ ಡಿ.2025 ರವರೆಗಿನ ಅವಧಿಯಲ್ಲಿ 221 ಪ್ರಶಸ್ತಿಗಳು ಲಭಿಸಿವೆ.

ಈ ನಡುವೆ ಶಕ್ತಿ ಯೋಜನೆ 625 ಕೋಟಿಗೂ ಅಧಿಕ ಮಹಿಳೆಯರಿಗೆ ಉಚಿತ ಟಿಕೆಟ್ ನೀಡುವ ಮೂಲಕ ದಾಖಲೆ ನಿರ್ಮಿಸಿದೆ. ದೇಶದ ವಿವಿಧ ರಾಜ್ಯಗಳ ಸಾರಿಗೆ ಸಚಿವರು ಮತ್ತು ಅಧಿಕಾರಿಗಳು ರಾಜ್ಯಕ್ಕೆ ಆಗಮಿಸಿ, ರಾಜ್ಯ ಸಾರಿಗೆ ಸಂಸ್ಥೆಗಳ ನಿರ್ವಹಣೆ ಕುರಿತು ಅಧ್ಯಯನ ನಡೆಸಿರುವುದು ಸಾರಿಗೆ ಸಂಸ್ಥೆಗಳ ಹೆಗ್ಗಳಿಕೆಯಾಗಿದೆ.


Share It

You cannot copy content of this page