ಬೆಂಗಳೂರು:
ಇತ್ತೀಚೆಗಷ್ಟೇ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ತವರು ರಾಜ್ಯ ಕರ್ನಾಟಕದಿಂದಲೇ ಮೊದಲ ವಿಘ್ನ ಎದುರಾಗಿದೆ.
ಏಕೆಂದರೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ರಾಜ್ಯದಲ್ಲಿ ನಡೆಸಲು ಉದ್ದೇಶಿಸಿದ್ದ KIOCL ಗಣಿಗಾರಿಕೆಗೆ ಸಂಬಂಧಿಸಿದ ಯೋಜನೆಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ತಡೆ ಹಾಕಿದೆ.
ಈ ಸಂಬಂಧ KIOCL ಗಣಿಗಾರಿಕೆಗೆ ಗುತ್ತಿಗೆ ಕೊಡದಂತೆ ಹಾಗೂ ಭೂಮಿಯನ್ನು ಹಸ್ತಾಂತರ ಮಾಡದಂತೆ ಕ್ರಮ ವಹಿಸಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

