ಶಿರಾ: ಗ್ರಾಮೀಣ ಯುವಕ ಯುವತಿಯರಿಗೆ ಅನುಕೂಲವಾಗಲೆಂದು ರಾಜ್ಯದಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸುತ್ತೇನೆ. ಜೊತೆಗೆ ಕುಂಚಿಟಿಗ ಸಮುದಾಯದವರಿಗೆ ಓಬಿಸಿ ಸ್ಥಾನಮಾನವನ್ನು ಕಲ್ಪಿಸಲು ಪ್ರಯತ್ನಿಸುತ್ತೇನೆ ಎಂದು ಕೇಂದ್ರ ಬೃಹತ್ ಕೈಗಾರಿಕೆಗಳ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಇಂದು ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ನಾನು ಕೇಂದ್ರದಲ್ಲಿ ಕೃಷಿ ಮಂತ್ರಿ ಆಗದಿದ್ದರೂ ರಾಜ್ಯದಲ್ಲಿರುವ ರೈತರ ಪರ ನಿಲ್ಲುತ್ತೇನೆ. ಈಗಾಗಲೇ ನಮ್ಮ ತಂದೆಯವರು ಕಾಡುಗೊಲ್ಲರ ಬಗ್ಗೆ ಪ್ರಸ್ತಾಪಿಸಿದ್ದು ನಾನು ಕೂಡ ನರೇಂದ್ರ ಮೋದಿಯವರಲ್ಲಿ ಕಾಡುಗೊಲ್ಲರ ಸಮಸ್ಯೆಗಳ ಬಗ್ಗೆ ಮಾತನಾಡುತ್ತೇನೆ ಎಂದರು.
ಅಲ್ಲದೇ ಕಾಡುಗೊಲ್ಲರ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಚಂಗಾವರ ಮಾರಣ್ಣ, ಕಾಡುಗೊಲ್ಲರಿಗೆ ಎಸ್ ಸಿ ಸ್ಥಾನಮಾನ ನೀಡುವಂತೆ ಕುಮಾರಸ್ವಾಮಿಯವರಿಗೆ ಮನವಿ ಪತ್ರವನ್ನು ನೀಡಿದರು.

