ಬೆಂಗಳೂರು: ವಿಧಾನಪರಿಷತ್‌ನ ಮುಖ್ಯಸಚೇತಕ ಸಲೀಂ ಅಹಮದ್ ಅವರ ವ್ಯಾಟ್ಸಾಪ್ ಅನ್ನು ಸೈಬರ್ ಖದೀಮರು ಹ್ಯಾಕ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮಂಗಳವಾರ ಬೆಳ್ಳಗ್ಗೆ ಕೊರಿಯರ್ ಬಂದಿದೆ ಎಂಬ ನೆಪವನ್ನಿಟ್ಟಿಕೊಂಡು ಕಾಲ್ ಮಾಡಿದ್ದ ಖದೀಮರು, ಅನಂತರ ವಾಟ್ಸಾಪ್ ಹ್ಯಾಕ್ ಮಾಡಿದ್ದರು. ಅವರಿಗೆ ಗೊತ್ತಿಲ್ಲದೆ ಒಂದಷ್ಟು ಸಂದೇಶಗಳನ್ನು ಕೆಲವರಿಗೆ ಕಳುಹಿಸಲಾಗಿತ್ತು. ಇದು ಗಮನಕ್ಕೆ ಬರುತ್ತಿದ್ದಂತೆ ಸಲೀಂ ಅಹಮದ್ ಪೊಲೀಸರಿಗೆ ದೂರು ನೀಡಿದ್ದಾರೆ.

