ದಾವಣಗೆರೆ: ಚನ್ನಗಿರಿ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿದ್ದ ಆದಿಲ್ ಎಂಬ ಆರೋಪಿಯ ಶವಪರೀಕ್ಷೆಯ ವರದಿ ಬಂದಿದ್ದು, ಆತ ಲೋ ಬಿಪಿಯಿಂದಲೇ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.
ಆತನ ಸಾವಿನ ನಂತರ ಚನ್ನಗಿರಿ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೆಲ ಕಿಡಿಗೇಡಿಗಳು ಪೊಲೀಸ್ ಠಾಣೆಯ ಮೇಲಕೆ ಕಲ್ಲು ತೂರಾಟ ನಡೆಸಿದ್ದರುಲ. ಈ ಸಂಬಂಧ 25 ಜನರನ್ನು ಪೊಲೀಸರು ಬಂಧಿಸಿದ್ದು, ಮೂವರು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು.
ಇಡೀ ಪ್ರಕರಣದ ತನಿಖೆಯನ್ನು ಸರಕಾರ ಸಿಐಡಿಗೆ ಒಪ್ಪಿಸಿದ್ದು, ನ್ಯಾಯಾಧೀಶರ ಸಮ್ಮುಖದಲ್ಲಿ ಶವಪರೀಕ್ಷೆ ನಡೆಸಲಾಗಿತ್ತು. ಇದೀಗ ವರದಿ ಬಂದಿದ್ದು, ಕಾರ್ಡಿಯಾ ಅಸ್ಮೆರಾದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರ ವರದಿ ತಿಳಿಸಿದೆ. ಲೋ ಬಿಪಿಯಿಂದಾಗುವ ಹೃದಯ ಸಮಸ್ಯೆ ಇದು ಎಂದು ಹೇಳಲಾಗುತ್ತಿದೆ. ವರದಿಯನ್ನು ಚನ್ನಗಿರಿ ಪೊಲೀಸರು ಸಿಐಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
