ಬೆಂಗಳೂರು: ಶಾಸಕರಿಗೆ ಬಿಸಿಮುಟ್ಟಿಸಿರುವ ಲೋಕಾಯುಕ್ತ ಜೂನ್ 30 ರೊಳಗೆ ತಮ್ಮ ಆಸ್ತಿ ವಿವರ ಸಲ್ಲಿಸುವಂತೆ ಖಡಕ್ ಸೂಚನೆ ನೀಡಿದೆ.
ಲೋಕಾಯುಕ್ತ ನಿಬಂಧಕರು ಪತ್ರ ಬರೆದಿದ್ದು, ಜೂನ್ 30ರೊಳಗೆ ಎಲ್ಲ ಶಾಸಕರು ಲೋಕಾಯುಕ್ತಕ್ಕೆ ತಮ್ಮ ಆಸ್ತಿ ವಿವರವನ್ನು ಸಲ್ಲಿಸಬೇಕು ಎಂದು ಸೂಚನೆ ನೀಡಿದೆ. ಈ ಸೂಚನೆಯ ಅನ್ವಯ ಎಲ್ಲ ಶಾಸಕರಿಗೆ ಪತ್ರ ಬರೆದಿರುವ ವಿಧಾನಸಭೆ ಕಾರ್ಯದರ್ಶಿ ಆಸ್ತಿ ವಿವರ ಸಲ್ಲಿಕೆಯ ಬಗ್ಗೆ ಸೂಚನೆ ನೀಡಿದ್ದಾರೆ.
ಲೋಕಾಯುಕ್ತದಿಂದ ಮಾರ್ಚ್ 21 ಕ್ಕೆ ಪತ್ರ ಬಂದಿದ್ದು, ಈ ಪತ್ರದ ವಿವರವನ್ನು ವಿಧಾನಸಭೆ ಕಾರ್ಯದರ್ಶಿ ಎಲ್ಲ ಶಾಸಕರಿಗೆ ರವಾನೆ ಮಾಡಿದ್ದಾರೆ. ಲೋಕಾಯುಕ್ತರ ಸೂಚನೆಯಂತೆ ಜೂ.೩೦ರೊಳಗೆ ತಮ್ಮ ಆಸ್ತಿ ವಿವರ ಸಲ್ಲಿಕೆ ಮಾಡಬೇಕು ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

