ದೆವ್ವ ಬಿಡಿಸಲು ಕಟ್ಟಿಗೆಯಿಂದ ಬಡಿದು ಅತ್ತಿಗೆಯನ್ನೇ ಕೊಂದ ಮೈದುನ
ಬೆಳಗಾವಿ: ದೆವ್ವ ಬಿಡಿಸಲು ಬೇವಿನ ಕಟ್ಟಿಗೆಯಿಂದ ಅತ್ತಿಗೆಯನ್ನು ಮನಬಂದAತೆ ಥಳಿಸಿ, ಆಕೆ ಮೃತಪಟ್ಟಿರುವ ಘಟನೆ ಶನಿಗಾಣಿಗಾಪುರದಲ್ಲಿ ನಡೆದಿದೆ.
ಶನಿಗಾಣಿಗಾಪುರ ದತ್ತನ ಸನ್ನಿದಾನದಲ್ಲಿ ದೆವ್ವ ಹಿಡಿದಿದೆ ಎಂಬ ಕಾರಣಕ್ಕೆ ಮುಕ್ತಬಾಯಿ ಎಂಬಾಕೆಯನ್ನು ಕರೆದು ತರಲಾಗಿತ್ತು. ಆಕೆಗೆ ದೆವ್ವ ಮೆಟ್ಟಿಕೊಂಡಿದೆ ಎಂದು ಆಕೆಯ ಪತಿ ಗಿಡ್ಡಪ್ಪ ಸಹೋದರ ಆಕೆಯ ಬೇವಿನ ಕಟ್ಟಿಗೆಯಿಂದ ಮನಬಂದAತೆ ಥಳಿಸಿದ್ದ. ಅನಂತರ ಸ್ನಾನ ಮಾಡಿದ ನಂತರ ಆಕೆ ಪ್ರಜ್ಞೆ ತಪ್ಪಿ ಬಿದ್ದು ಹೋಗಿದ್ದಳು.
ಈ ವಿಷಯವನ್ನು ಮುಕ್ತಾಬಾಯಿಯ ತಾಯಿ ತಿಪ್ಪವ್ವಗೆ ತಿಳಿಸಿದ್ದ ಮೈದುನ ಅಲ್ಲಿಂದ ಪರಾರಿಯಾಗಿದ್ದ. ಮಗಳನ್ನು ಮಹಾರಾಷ್ಟçದ ಆಸ್ಪತ್ರೆಗೆ ದಾಖಲಿಸಿದ ತಿಪ್ಪವ್ವ ಚಿಕಿತ್ಸೆ ಕೊಡಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮುಕ್ತಾಬಾಯಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಇದೀಗ ಮುಕ್ತಬಾಯಿ ತಾಯಿ ತಿಪ್ಪವ್ವ ಹಾಗೂ ಸೋದರಿ ಶ್ರೀದೇವಿ, ಮುಕ್ತಬಾಯಿ ಪತಿಯ ಕುಟುಂಭ ಹಾಗೂ ಆಕೆಯ ಮೈದುನನ ಮೇಲೆ ಕೊಲೆ ಆರೋಪ ಮಾಡಿದ್ದಾರೆ. ಗಿಡ್ಡಪ್ಪ ಕುಟುಂಬಸ್ಥರ ವಿರುದ್ಧ ಮಹಾರಾಷ್ಟçದ ಮುರುಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


