ಬೆಂಗಳೂರು: ಮಲೇಷ್ಯಾ ಪ್ರವಾಸೋದ್ಯಮ ವತಿಯಿಂದ ಬೆಂಗಳೂರಿನಲ್ಲಿ ಫೆ.13ರಂದು ಶಾಂಗ್ರಿ-ಲಾದಲ್ಲಿ ಮಲೇಷಿಯನ್ ಅಸೋಸಿಯೇಷನ್ ಆಫ್ ಟೂರ್ ಅಂಡ್ ಟ್ರಾವೆಲ್ ಏಜೆಂಟ್ಸ್ (MATTA) ಸಹಭಾಗಿತ್ವದಲ್ಲಿ ʼಸೇಲ್ಸ್ ಮಿಷನ್ 2026ʼ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಮಲೇಷ್ಯಾ ದೇಶದ 49 ಮಾರಾಟಗಾರರು ಮತ್ತು ಬೆಂಗಳೂರಿನ ಪ್ರಮುಖ ಪ್ರಯಾಣದಲ್ಲೇ ನಿರತರಾದ ವ್ಯಾಪಾರಿ ಪಾಲುದಾರರನ್ನು ಮತ್ತು ವಿಶಾಲವಾದ ಕರ್ನಾಟಕ ಮಾರುಕಟ್ಟೆ ಪ್ರಭಾವಿಗಳನ್ನು ಒಟ್ಟು ಗೂಡಿಸಲು ಈ ಕಾರ್ಯಕ್ರಮವು ವೇದಿಕೆಯಾಯಿತು .
ಮಲೇಷ್ಯಾ ಪ್ರವಾಸೋದ್ಯಮದ ಅಧ್ಯಕ್ಷ ಡಾತುಕ್ ಮನೋಹರನ್ ಪೆರಿಯಸಾಮಿ ಮತ್ತು ಮಲೇಷ್ಯಾ ಪ್ರವಾಸೋದ್ಯಮದ ಅಂತರರಾಷ್ಟ್ರೀಯ ಪ್ರಚಾರ (ಏಷ್ಯಾ/ಆಫ್ರಿಕಾ) ವಿಭಾಗದ ಹಿರಿಯ ನಿರ್ದೇಶಕಿ ಎಂಡಿಎಂ ನುವಾಲ್ ಫಾದಿಲಾ ಬಿಂಟಿ ಕು ಅಜ್ಮಿ ಅವರೊಂದಿಗೆ ಈ ಕಾರ್ಯಕ್ರಮದ ನೇತೃತ್ವ ವಹಿಸಿದ್ದು, ಭಾರತದಲ್ಲಿ, ವಿಶೇಷವಾಗಿ ದಕ್ಷಿಣ ಭಾಗದಲ್ಲಿ ಮಲೇಷ್ಯಾ ಪ್ರವಾಸೋದ್ಯಮವು ತನ್ನ ಅಸ್ತಿತ್ವ ಬಲಪಡಿಸುವತ್ತ ನಿರಂತರ ಬದ್ಧತೆಗೆ ಸಾಕ್ಷ್ಯ ಒದಗಿಸಿತು.
ಮಲೇಷ್ಯಾದ ಪ್ರಮುಖ ಮೂಲ ಮಾರುಕಟ್ಟೆಗಳಲ್ಲಿ ಭಾರತ ಒಂದು ಭಾಗವಾಗಿದೆ. 2025 ರಲ್ಲಿ 1,565,194 ಪ್ರವಾಸಿಗರ ಆಗಮಿಸಿದ್ದು, 2024 ರಲ್ಲಿ 1,365,387 ಕ್ಕೆ ಹೋಲಿಸಿದರೆ, ಇದು ಶೇ.14.6% ರಷ್ಟು ಹೆಚ್ಚಳವಾಗಿದೆ. ʼವಿಸಿಟ್ ಮಲೇಷ್ಯಾ ವರ್ಷ 2026 (VMY2026)ʼ ಗೆ ಅನುಗುಣವಾಗಿ, ಮಲೇಷ್ಯಾ ಪ್ರವಾಸೋದ್ಯಮವು ಭಾರತದಿಂದ 2.1 ಮಿಲಿಯನ್ ಪ್ರವಾಸಿಗ ಆಗಮನವನ್ನು ನಿರೀಕ್ಷಿಸುತ್ತಿದೆ.
14 ಭಾರತೀಯ ನಗರಗಳಿಂದ ವಾರಕ್ಕೆ 47,399 ಆಸನಗಳುಳ್ಳ 238 ನೇರ ವಿಮಾನಗಳು ಈ ಪ್ರವಾಸೋ ದ್ಯಮ ಕೊಂಡಿಗೆ ಬಲ ತುಂಬಿದ್ದು ಎರಡೂ ದೇಶಗಳ ನಡುವಿನ ವಿಮಾನ ಸಂಪರ್ಕವನ್ನು ಬೆಂಬಲಿಸು ತ್ತಿವೆ. ಇದರಲ್ಲಿ ದಕ್ಷಿಣ ಭಾರತವು ಪ್ರಮುಖ ಪಾತ್ರ ವಹಿಸುತ್ತಿದೆ. 29,541 ಆಸನಗಳುಳ್ಳ 151 ವಾರದ ನೇರ ವಿಮಾನಗಳು ಈ ನಿಟ್ಟಿನಲ್ಲಿ ತಮ್ಮ ಕೊಡುಗೆ ನೀಡುತ್ತಿದೆ. ಈ ಸೌಲಭ್ಯಯು ಬೆಳವಣಿಗೆಯು ಭಾರತೀಯ ಪ್ರಯಾಣಿಕರಿಗೆ ಮಲೇಷ್ಯಾ ಪ್ರಯಾಣವನ್ನು ಹೆಚ್ಚು ಅನುಕೂಲಕರವಾಗಿಸುತ್ತದೆ.
ಚೆನ್ನೈನಲ್ಲಿರುವ ಮಲೇಷ್ಯಾ ಕಾನ್ಸುಲ್ ಜನರಲ್ ಶ್ರೀ ಕೆ. ಸರವಣ ಕುಮಾರ್ ಅವರು, ಮಲೇಷ್ಯಾ-ಭಾರತ ಸಂಬಂಧಗಳಲ್ಲಿ ಕಾರ್ಯತಂತ್ರದ ಆಧಾರಸ್ತಂಭವಾಗಿ ಪ್ರವಾಸೋದ್ಯಮವು ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು, ಚೆನ್ನೈನಲ್ಲಿರುವ ಮಲೇಷ್ಯಾ ಕಾನ್ಸುಲೇಟ್ ಜನರಲ್, ದಕ್ಷಿಣ ಭಾರತದಾದ್ಯಂತ ಮಲೇಷ್ಯಾ ಪ್ರವಾಸೋದ್ಯಮಕ್ಕೆ ಸಂಬಧಿಸಿದ ಕಾರ್ಯಕ್ರಮಗಳು ಮತ್ತು ಪ್ರಯತ್ನಗಳಿಗೆ ತನ್ನ ನಿರಂತರ ಬೆಂಬಲವನ್ನು ದೃಢೀಕರಿಸುತ್ತಲೇ ಬಂದಿದೆ.
ಭಾರತದಿಂದ ಮಲೇಷ್ಯಾಕ್ಕೆ ಆಗಮಿಸುವವರ ಸಂಖ್ಯೆ ಮತ್ತಷ್ಟು ಹೆಚ್ಚಲು ಕಾನ್ಸುಲೇಟ್ ಜನರಲ್ ಉದ್ಯಮ ಪಾಲುದಾರಿಕೆಗಳು, ಪ್ರಚಾರ ಉಪಕ್ರಮಗಳು ಮತ್ತು ಪಾಲುದಾರರ ತೊಡಗಿಸಿಕೊಳ್ಳುವಿಕೆಯನ್ನು ಸಕ್ರಿಯವಾಗಿ ಸುಗಮಗೊಳಿಸುತ್ತಿದೆ. ಈ ಸಂಘಟಿತ ಪ್ರಯತ್ನಗಳು ಗಮ್ಯಸ್ಥಾನ ಕುಉತಾದ ಜಾಗೃತಿಯನ್ನು ಹೆಚ್ಚಿಸುವುದು, ಪ್ರವಾಸೋದ್ಯಮ ಹಾಗೂ ವ್ಯಾಪಾರ ಸಂಪರ್ಕಗಳನ್ನು ಬಲಪಡಿಸುವುದು ಮತ್ತು ದ್ವಿಪಕ್ಷೀಯ ಸಹಕಾರವನ್ನು ವಿಸ್ತರಿಸುವ ಗುರಿಯನ್ನು ಹೊಂದಿವೆ.
ಜನರಿಂದ ಜನರಿಗೆ ಸಂಪರ್ಕಗಳನ್ನು ಬಲಪಡಿಸುವಲ್ಲಿ, ಪ್ರವಾಸೋದ್ಯಮ ವ್ಯವಹಾರ ಸಹಯೋಗ ಉತ್ತೇಜಿಸುವಲ್ಲಿ ಮತ್ತು ಮಲೇಷ್ಯಾ ಮತ್ತು ಭಾರತದ ನಡುವಿನ ಸಾಂಸ್ಕೃತಿಕ ಮತ್ತು ಪ್ರಯಾಣ ವಿನಿಮಯವನ್ನು ಗಾಢವಾಗಿಸುವಲ್ಲಿ ಪ್ರವಾಸೋದ್ಯಮ ಪ್ರಚಾರ ಕುರಿತಾದ ವ್ಯವಹಾರಗಳು ಮತ್ತು ಕೈಗಾರಿಕಾ ಜಾಲ ವೇದಿಕೆಗಳಂತಹ ಕಾರ್ಯಕ್ರಮಗಳು ಪ್ರಮುಖ ಪಾತ್ರ ವಹಿಸುತ್ತವೆ.
ಈ ಉಪಕ್ರಮಗಳು ಮಲೇಷ್ಯಾಕ್ಕೆ ಭೇಟಿ ನೀಡುವ ವರ್ಷ 2026 ರ ಬೆಂಬಲಿತ ಭಾಗವಾಗಿದೆ. ಇದರಿಂದಾಗಿ, ಮಲೇಷ್ಯಾವನ್ನು ಭಾರತೀಯ ಪ್ರಯಾಣಿಕರಿಗೆ ಆದ್ಯತೆಯ ಮತ್ತು ಪ್ರವೇಶಿಸಬಹುದಾದ ತಾಣದ ಸ್ಥಾನಮಾನ ನೀಡಲು ಪ್ರಯತ್ನಿಸುತ್ತದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಮಲೇಷ್ಯಾ ಪ್ರವಾಸೋದ್ಯಮದ ಅಧ್ಯಕ್ಷ ಡಾತುಕ್ ಮನೋಹರನ್ ಪೆರಿಯಸಾಮಿ, ಮಲೇಷ್ಯಾದ ವ್ಯಾಪಾರ ಪಾಲುದಾರಿಕೆ ಬಲಪಡಿಸುವ ಮತ್ತು ವೈವಿಧ್ಯಮಯ ಪ್ರವಾಸೋ ದ್ಯಮ ವಿಭಾಗಗಳನ್ನು ಉತ್ತೇಜಿಸುವ ಆದ್ಯತೆಯನ್ನು ಒತ್ತಿ ಹೇಳಿದರು.
ʼಮಾರಾಟ ಮಿಷನ್ʼದಲ್ಲಿ ವಿರಾಮದ ಪ್ರಯಾಣ, ಕುಟುಂಬದ ರಜಾದಿನಗಳು, ದ್ವೀಪ ವಿಹಾರಗಳು, ಶಾಪಿಂಗ್, ಸಂಸ್ಕೃತಿ ಮತ್ತು ಪ್ರಕೃತಿ ಆಧಾರಿತ ಅನುಭವಗಳು ಸೇರಿದಂತೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಮಲೇಷ್ಯಾದ ವ್ಯಾಪಕ ಕೊಡುಗೆಗಳತ್ತ ಬೆಳಕು ಚೆಲ್ಲಲಾಯಿತು. ಜೊತೆಗೆ MICE ಮತ್ತು ವಿವಾಹ ಪ್ರವಾಸೋದ್ಯಮಕ್ಕೆ ಭಾರತೀಯ ಪ್ರಯಾಣಿಕರಲ್ಲಿ ಹೆಚ್ಚುತ್ತಿರುವ ಬೇಡಿಕೆಗೂ ಪ್ರಾಮುಖ್ಯತೆ ಇರುವು ದನ್ನು ಎತ್ತಿ ತೋರಿಸಿತು.
ಅಂತರರಾಷ್ಟ್ರೀಯ ಪ್ರಚಾರ (ಏಷ್ಯಾ/ಆಫ್ರಿಕಾ) ವಿಭಾಗದ ಹಿರಿಯ ನಿರ್ದೇಶಕಿ ಶ್ರೀಮತಿ ನುವಾಲ್ ಫಾದಿಲಾ ಬಿಂತಿ ಕು ಅಜ್ಮಿ, ಮಲೇಷಿಯಾದ ಮಾರಾಟಗಾರರು ಮತ್ತು ಭಾರತೀಯ ವ್ಯಾಪಾರ ಪಾಲುದಾರರನ್ನು ಒಂದೇ ವೇದಿಕೆಯಡಿಯಲ್ಲಿ ತರುವ ಮೂಲಕ MTEX ಮೂಲಕ ವ್ಯಾಪಾರಸ್ಥರ ಮಿಲನವನ್ನು ಬಲಪಡಿಸುವ ಮಹತ್ವವನ್ನು ಒತ್ತಿ ಹೇಳಿದರು.
ಮಲೇಷ್ಯಾಕ್ಕೆ ಕಾರ್ಯತಂತ್ರದ ಮಾರುಕಟ್ಟೆಯಾಗಿ ಬೆಂಗಳೂರು ನಗರ ಮುಂದುವರೆದಿದೆ. 2026ರ ಮಲೇಷ್ಯಾ ಭೇಟಿ ವರ್ಷಕ್ಕೆ ಮುಂಚಿತವಾಗಿ ನವೀಕರಿಸಿದ ಪ್ರವಾಸೋದ್ಯಮ ಉತ್ಪನ್ನಗಳು, ಹೊಸ ತಾಣಗಳು ಮತ್ತು ಉಲ್ಲಾಸಕರ ಅನುಭವಗಳ ಪರಿಚಯಿಸುವ ಮೂಲಕ ವ್ಯಾಪಾರ ಸಹಯೋಗವನ್ನು ವಿಸ್ತರಿಸಲು ಮಲೇಷ್ಯಾ ಪ್ರವಾಸೋದ್ಯಮವು ಬದ್ಧವಾಗಿದೆ ಎಂದು ಇದೇ ವೇಳೆ ತಿಳಿಸಿದರು.
ಪ್ರವಾಸೋದ್ಯಮ ಮಲೇಷ್ಯಾದ ಪ್ರಬಲ ಮಾರುಕಟ್ಟೆಗಳಲ್ಲಿ ದಕ್ಷಿಣ ಭಾರತದ ಬೆಂಗಳೂರು ನಗರ ಒಂದಾಗಿದ್ದು, ವಿರಾಮ, ಐಷಾರಾಮಿ, MICE, ಮದುವೆಗಳು ಮತ್ತು ಕಾರ್ಪೊರೇಟ್ ವಿಭಾಗಗಳಲ್ಲಿ ವಿದೇಶ ಪ್ರಯಾಣ ಮಾಡುವರ ಸಂಖ್ಯೆ ಹೆಚ್ಚು. VMY2026 ಕ್ಕಿಂತ ಮುಂಚಿತವಾಗಿ ನವೀಕರಿಸಿದ ಗಮ್ಯಸ್ಥಾನ ಜ್ಞಾನ, ಉತ್ಪನ್ನ ಕೊಡುಗೆಗಳು ಮತ್ತು ಹೊಸ ಅವಕಾಶಗಳೊಂದಿಗೆ ವ್ಯಾಪಾರ ಕ್ಷೇತ್ರದ ಪಾಲುದಾರರನ್ನು ಬೆಂಬಲಿಸಲು ʼಮಾರಾಟ ಮಿಷನ್ʼ ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಮಲೇಷ್ಯಾ ಚೆನ್ನೈ ಪ್ರವಾಸೋದ್ಯಮ ನಿರ್ದೇಶಕರಾದ ಹಿಶಾಮುದ್ದೀನ್ ಮುಸ್ತಫಾ ಹೇಳಿದರು.
ಮಲೇಷ್ಯಾಕ್ಕೆ ಸಂಪರ್ಕ ಮತ್ತು ಪ್ರಯಾಣದ ಅವಕಾಶಗಳಿಗೆ ಮತ್ತಷ್ಟು ಬೆಂಬಲ ನೀಡಲು ಮಾರಾಟ ಮಿಷನ್ 2026 ಕಾರ್ಯಕ್ರಮಕ್ಕೆ ಅಧಿಕೃತ ವಿಮಾನಯಾನ ಪಾಲುದಾರರಾಗಿ ಬಾಟಿಕ್ ಏರ್ ಮತ್ತು ಪಾಲುದಾರ ವಿಮಾನಯಾನ ಸಂಸ್ಥೆಯಾಗಿ ಬೆಂಗಳೂರು ಕಾರ್ಯಕ್ರಮವನ್ನು ಬಾಟಿಕ್ ಏರ್ ಬೆಂಬಲಿಸುತ್ತದೆ.
ಉಭಯ ದೇಶಗಳ ದ್ವಿಪಕ್ಷೀಯ ಪ್ರವಾಸೋದ್ಯಮ ಬೆಳವಣಿಗೆಗೆ ಮತ್ತಷ್ಟು ಬಲ ತುಂಬಲು ಮತ್ತು ಭಾರತೀಯ ಪ್ರಯಾಣಿಕರಿಗೆ ಪ್ರವಾಸದ ವಿಚಾರವಾಗಿ ಆದ್ಯತೆಯ ತಾಣವಾಗಿ ಮಲೇಷ್ಯಾವನ್ನು ಪರಿಗಣಿಸಲು, ಭಾರತೀಯ ಪ್ರಯಾಣ ನಿರತ ವ್ಯಾಪಾರಿಗಳು, ವಿಮಾನಯಾನ ಸಂಸ್ಥೆಗಳು ಮತ್ತು ಉದ್ಯಮದ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ಮಾಡಲು ಮಲೇಷ್ಯಾ ಪ್ರವಾಸೋದ್ಯಮವು ಬದ್ಧವಾಗಿದೆ.

