ಜಾಲತಾಣದಲ್ಲಿ ಎಚ್.ಕೆ. ಪಾಟೀಲ್‌ಗೆ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿಯ ಬಂಧನ
ಗದಗ: ಸಾಮಾಜಿಕ ಜಾಲತಾಣದಲ್ಲಿ ಸಚಿವ ಎಚ್.ಕೆ.ಪಾಟೀಲ್‌ಗೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿ ವೀರಣ್ಣ ಬೀಗಳಿ ಎಂಬಾತ. ಈಗ ಡಿ. ೧೪ರಂದು ಸಾಮಾಜಿಕ ಜಾಲತಾಣದಲ್ಲಿ ಸಚಿವ ಎಚ್.ಕೆ.ಪಾಟೀಲ್‌ರನ್ನು ನಿಲ್ಲಿಸಿ ಎಕೆ ೪೭ ಬಳಸಿ ಗುಂಡು ಹೊಡೆಯಬೇಕು ಎಂದು ಪೋಸ್ಟ್ ಮಾಡಿದ್ದ.
ಇದಕ್ಕೆ ಸಂಬAಧಿಸಿದAತೆ ಕಾಂಗ್ರೆಸ್ ನಾಯಕರೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಪೊಲೀಸರು, ವೀರಣ್ಣ ಬೀಳಗಿ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.


