ಬೆಂಗಳೂರು: ನಂಗೆ ಅದೇ ದುಡ್ಡು ಬೇಕು ಅಂತ ಮಕ್ಕಳು ಹಠ ಹಿಡಿಯೋದು ಕಂಡಿದ್ದೀರಿ, ಆದ್ರೆ, ಇಲ್ಲೊಬ್ಬ ನಡುವಯಸ್ಕ ನಂಗೆ ಅದೇ ನೋಟು ಬೇಕು ಅಂತ ಹಠ ಹಿಡಿದು ನೀರಿನ ಟ್ಯಾಂಕ್ ಏರಿ ಕುಳಿತ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನಲ್ಲಿ ನಡೆದ ಈ ಘಟನೆಯಲ್ಲಿ ನಾಗೇಶ್ ಎಂಬಾತ ತನ್ನ ಐನೂರರ ನೋಟು ಕೊಡಿ ಅಂತ ಹಠಕ್ಕೆ ಬಿದ್ದಿದ್ದ. ಬೇರೆ ನೋಟು ಕೊಟ್ರು , ಅದು ನಂಗೆ ಬ್ಯಾಡ ನನ್ ನೋಟೇ ನಂಗೆ ಬೇಕು ಅಂತ ಹಠ ಮಾಡಿ ಕೊನೆಗೆ ನೀರಿನ ಟ್ಯಾಂಕ್ ಏರಿ ಕುಳಿತುಕೊಂಡು ಬಿಟ್ಟ.
ನಾಗೇಶನ ಈ ವರ್ತನೆ ಕಂಡು ಸ್ಥಳೀಯರು ಭಯಗೊಂಡು ಪೊಲೀಸರಿಗೆ ವಿಷಯ ಮುಟ್ಟಿಸಿದ್ರು. ಸ್ಥಳಕ್ಕೆ ಬಂದ ಪೊಲೀಸರು ಆತನ ಮನವೊಲಿಸುವ ಪ್ರಯತ್ನ ಮಾಡಿದ್ರು. ಆದ್ರೆ, ಆತ ಯಾರ ಮಾತು ಕೇಳಲೇ ಇಲ್ಲ. ಕಡೆಗೆ ಪೊಲೀಸ್ ಸಿಬ್ಬಂದಿ ಒಬ್ಬರು ಟ್ಯಾಂಕ್ ಮೇಲೆ ಎತ್ತಿ ಐನೂರರ ನೋಟು ಕೊಡೋಕೆ ಹೋದ್ರು. ಅಣ್ಣ ಅದಕ್ಕೂ ಜಗ್ಗದೆ ನಂಗೆ ನನ್ ನೋಟೇ ಬೇಕು ಇಲ್ಲಂದ್ರೆ ಜಿಗೀತೀನಿ ಅಂತ ಬೆದರಿಕೆ ಹಾಕಿದೆ.
ಹೀಗೆ ಗಂಟೆಗಟ್ಟಲೆ ನಡೆದ ಹೈಡ್ರಾಮದಲ್ಲಿ ಕೊನೆಗೂ ಪೊಲೀಸರು ನಾಗೇಶನನ್ನು ಟ್ಯಾಂಕ್ ನಿಂದ ಕೆಳಗಿಳಿಸಿ, ನಿಟ್ಟುಸಿರು ಬಿಟ್ಟರು. ಆದರೂ ನಾಗೇಶ್ ಮಾತ್ರ ನನ್ ಐನೂರು ಅನ್ಮೋದು ಬಿಟ್ಟಿರಲಿಲ್ಲ, ಪೊಲೀಸರು ನಾಲ್ಕ್ ಬಿಟ್ರೆ, ಅಂತ ಬೈದುಕೊಂಡು ಪೊಲೀಸ್ ಸ್ಟೇಷನ್ ಗೆ ಕರೆದೊಯ್ದರು. ಇಡೀ ಊರಿಗೇ ಊರೇ ಈ ಹೈಡ್ರಾಮ ನೋಡುತ್ತಾ ನಿಂತಿದ್ದು ಕಂಡುಬಂತು.