ಉಪಯುಕ್ತ ಸುದ್ದಿ

ಡಿಜಿಟಲ್ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಅನುದಾನಿತ ಶ್ರೀ ಶಾರದಾ ವಿದ್ಯಾ ಮಂದಿರದಲ್ಲಿ ಅತ್ಯಾಧುನಿಕ ಕ್ಲಾಸ್ ರೂಮ್ ಉದ್ಘಾಟಿಸಿದ ಮನಾ!

Share It

ಬೆಂಗಳೂರು: ಪ್ರಮುಖ ರಿಯಲ್ ಎಸ್ಟೇಟ್ ಡೆವಲಪರ್ ಆಗಿರುವ ಮನ ಪ್ರಾಜೆಕ್ಟ್ಸ್ ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಭಾಗವಾಗಿ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಕೊಡುಗೆ ನೀಡುವ ಸಲುವಾಗಿ ಇಂದು ಬೆಂಗಳೂರಿನ ತಿಪ್ಪಸಂದ್ರದಲ್ಲಿರುವ ಅನುದಾನಿತ ಶ್ರೀ ಶಾರದಾ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆ (ಎಸ್ ಎಸ್ ವಿ ಎಂ)ಯಲ್ಲಿ ಅತ್ಯಾಧುನಿಕ ಡಿಜಿಟಲ್ ಕ್ಲಾಸ್ ರೂಮ್ ಅನ್ನು ಉದ್ಘಾಟಿಸಿದೆ. ಡಿಜಿಟಲ್ ಶಿಕ್ಷಣವನ್ನು ಒದಗಿಸುವ ಮತ್ತು ಈ ಪ್ರದೇಶದಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶವನ್ನು ಈ ಉಪಕ್ರಮವು ಹೊಂದಿದೆ.

ಉದ್ಘಾಟನಾ ಸಮಾರಂಭದಲ್ಲಿ ಮನಾ ಪ್ರಾಜೆಕ್ಟ್ಸ್ ಮತ್ತು ಎಸ್ ಎಸ್ ವಿ ಎಂ ಶಾಲೆಯ ಆಡಳಿತ ಮಂಡಳಿಯ ಪ್ರಮುಖ ಪ್ರತಿನಿಧಿಗಳು ಭಾಗವಹಿಸಿದ್ದರು. ತನ್ನ ಸಂಪನ್ಮೂಲಗಳು ಮತ್ತು ಪರಿಣತಿಯನ್ನು ಸೂಕ್ತ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳುವ ಮನಾ ಪ್ರಾಜೆಕ್ಟ್ಸ್ ನ ದೃಷ್ಟಿಯ ಜೊತೆಗೆ ಈ ಉಪಕ್ರಮವು ಸೂಕ್ತವಾಗಿ ಹೊಂದಿಕೆಯಾಗುತ್ತದೆ.

ಈ ಕುರಿತು ಮಾತನಾಡಿದ ಮನಾ ಪ್ರಾಜೆಕ್ಟ್ಸ್ ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ. ಡಿ ಕಿಶೋರ್ ರೆಡ್ಡಿ, “ಮನಾದಲ್ಲಿ ನಾವು ನಿಜವಾದ ಅಭಿವೃದ್ಧಿಯು ಕಟ್ಟಡಗಳನ್ನು ನಿರ್ಮಿಸುವುದಕ್ಕಿಂದ ಮೀರಿದ್ದು ಮತ್ತು ಭವಿಷ್ಯವನ್ನು ಕಟ್ಟುವುದು ಎಂಬುದನ್ನು ನಂಬಿದ್ದೇವೆ. ಈ ಡಿಜಿಟಲ್ ಕ್ಲಾಸ್ ರೂಮ್ ಉಪಕ್ರಮವು ನಮ್ಮ ಸಮುದಾಯವನ್ನು ಉನ್ನತೀಕರಿಸಲು ಎಂಜಿನಿಯರಿಂಗ್ ಪರಿಹಾರಗಳನ್ನು ಬಳಸುವ ನಮ್ಮ ಬದ್ಧತೆಯನ್ನು ತೋರಿಸುತ್ತದೆ. ಯುವ ಮನಸ್ಸುಗಳನ್ನು ಡಿಜಿಟಲ್ ಸಾಕ್ಷರರಾಗಿ ಮಾಡುವ ಮೂಲಕ ನಾವು ಅವರನ್ನು ಭವಿಷ್ಯಕ್ಕೆ ಸಿದ್ಧಗೊಳಿಸುತ್ತಿದ್ದೇವೆ, ಜೊತೆಗೆ ಭವಿಷ್ಯ ರೂಪಿಸಲು ಸಜ್ಜುಗೊಳಿಸುತ್ತಿದ್ದೇವೆ” ಎಂದು ಹೇಳಿದರು.

ಹೊಸದಾಗಿ ಉದ್ಘಾಟನೆಗೊಂಡ ಡಿಜಿಟಲ್ ಕ್ಲಾಸ್‌ರೂಮ್ ನಲ್ಲಿ ಉತ್ತಮ ಶಿಕ್ಷಣತಜ್ಞರ ನೇತೃತ್ವದಲ್ಲಿ ನೇರ ಸಂವಾದಾತ್ಮಕ ಆನ್‌ಲೈನ್ ತರಗತಿಗಳು ನಡೆಯಲಿವೆ. ಲೈವ್ ತರಗತಿಗಳ ಜೊತೆಗೆ ವಿದ್ಯಾರ್ಥಿಗಳು ಪ್ರತಿ ಅಧ್ಯಾಯಗಳ ವಿವರವಾದ ಮಾಹಿತಿಗಳನ್ನು ಪಡೆಯುತ್ತಾರೆ. ವರ್ಕ್‌ಶೀಟ್‌ಗಳನ್ನು ಒಳಗೊಂಡಂತೆ ಅತ್ಯುತ್ತಮ ಗ್ರಂಥಾಲಯ ಉಪಯೋಗಿಸುವ ಅವಕಾಶ ಪಡೆಯುತ್ತಾರೆ. ಈ ಸುಧಾರಿತ ವ್ಯವಸ್ಥೆಯನ್ನು ಸಂವಾದಾತ್ಮಕವಾಗಿ ಮತ್ತು ಪರಿಣಾಮಕಾರಿಯಾಗಿ ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ವಿನ್ಯಾಸಗೊಳಿಸಲಾಗಿದೆ.

ಕಾರ್ಯಕ್ರಮದಲ್ಲಿ ಡಿಜಿಟಲ್ ಕ್ಲಾಸ್ ರೂಮ್ ನ ಸಾಮರ್ಥ್ಯಗಳನ್ನು ಪ್ರದರ್ಶಿಸಲಾಯಿತು. ಕಲಿಕೆಯನ್ನು ಉನ್ನತೀಕರಿಸಲು ತಂತ್ರಜ್ಞಾನವನ್ನು ಹೇಗೆ ಬಳಸಬಹುದು ಎಂಬುದನ್ನು ತೋರಿಸಲಾಯಿತು. ಶಿಕ್ಷಣತಜ್ಞರು ಮತ್ತು ಮನಾ ಪ್ರತಿನಿಧಿಗಳು ಈ ಉಪಕ್ರಮದ ದೀರ್ಘಕಾಲದ ಪರಿಣಾಮಗಳ ಕುರಿತು ಚರ್ಚೆ ನಡೆಸಿದರು.

ಈ ಮಹತ್ವದ ಸಂದರ್ಭವನ್ನು ನೆನಪಿನಲ್ಲಿ ಶಾಶ್ವವಾಗಿರಿಸುವ ಉದ್ದೇಶದಿಂದ ಮನಾ ಪ್ರಾಜೆಕ್ಟ್ಸ್ 5 ಸಸಿಗಳನ್ನು ನೆಟ್ಟಿದೆ. ಜೊತೆಗೆ ಮನಾ 8, 9 ಮತ್ತು 10 ನೇ ತರಗತಿಯ ಟಾಪ್ 3 ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ಸಾಧನೆಗೆ ಮತ್ತು ಕಲಿಕೆಯಲ್ಲಿನ ಬದ್ಧತೆಗೆ ಗೌರವ ಸಲ್ಲಿಸಿದೆ.


Share It

You cannot copy content of this page