ವಯನಾಡ್ ಗುಡ್ಡ ಕುಸಿತ ದುರಂತ: ಮನೆಯ ಮತ್ತಿಬ್ಬರಿಗಾಗಿ ಮಂಡ್ಯ ಮೂಲದ ಕುಟುಂಬದ ಕುಡುಕಾಟ
ವಯನಾಡ್:ವಯನಾಡ್ ಗುಡ್ಡ ಕುಸಿತದಲ್ಲಿ ಬದುಕುಳಿದು ಆಸ್ಪತ್ರೆಯಲ್ಲಿರುವ ಮಂಡ್ಯ ಮೂಲದ ಕುಟುಂಬವೊಂದು, ತಮ್ಮವರಿಗಾಗಿ ತಡಕಾಟ ನಡೆಸುತ್ತಿರುವ ಮನಮಿಡಿಯುವ ಘಟನೆ ನಡೆದಿದೆ.
ಮಂಡ್ಯ ಮೂಲದ ಸಿದ್ಧೇಶ್ ಎಂಬಾತನ ಇಡೀ ಕುಟುಂಬ ವಯನಾಡ್ ಗುಡ್ಡ ಕುಸಿತದ ಸ್ಥಳದಲ್ಲಿ ವಾಸವಾಗಿತ್ತು. ಇಡೀ ಕುಟುಂಬ ದುರಂತದಲ್ಲಿ ಸಿಲುಕಿಕೊಂಡಿದ್ದು, ರಕ್ಷಣಾ ಪಡೆಗಳು ಮೂವರನ್ನು ರಕ್ಷಣೆ ಮಾಡಿವೆ. ಆದರೆ, ಇನ್ನುಳಿದ ಇಬ್ಬರ ಮಾಹಿತಿ ಈವರೆಗೆ ಲಭ್ಯವಾಗಿಲ್ಲ.
ಈ ಕಾರಣದಿಂದ ಆಸ್ಪತ್ರೆಯಲ್ಲಿ ಇರುವ ಸಿದ್ದೇಶ್, ರಕ್ಷಣಾ ಕಾರ್ಯದಲ್ಲಿ ಹೊರತೆಗೆದು ಪೋಸ್ಟ್ ಮಾರ್ಟ್ಂ ಮಾಡಲು ಆಸ್ಪತ್ರೆಗೆ ಬರುತ್ತಿರುವ ಹೆಣಗಳ ರಾಶಿಯಲ್ಲಿ ತಮ್ಮವರನ್ನು ಹುಡುಕುತ್ತಿದ್ದಾರೆ. ನಮ್ಮ ಮನೆಯ ಮತ್ತಿಬ್ಬರು ಅಲ್ಲಿಯೇ ಸಿಲುಕಿದ್ದು, ಅವರ ರಕ್ಷಣೆ ಮಾಡಿ ಎಂದು ಮನವಿ ಮಾಡಿದ್ದಾರೆ.
ಮನೆ ಕುಸಿದಿರುವ ಸ್ಥಳದಲ್ಲಿಯೇ ಹುಡುಕಿ, ನಾವೆಲ್ಲರೂ ಒಟ್ಟಿಗೆ ಇದ್ದೆವು. ದುರಂತ ನಡೆದಿದ್ದೇ ನಮ್ಮ ಅರಿವಿಗೆ ಬರಲಿಲ್ಲ. ನಮ್ಮವರನ್ನು ಹುಡುಕಿಕೊಡಿ ಎಂದು ಅಧಿಕಾರಿಗಳ ಮುಂದೆ ಅಳಲು ನೋಡಿಕೊಳ್ಳುತ್ತಿದ್ದಾರೆ.


