ರಾಜಕೀಯ ಸುದ್ದಿ

ಸಿದ್ದಗಂಗಾ ಮಠಕ್ಕೆ ಮಂಜುನಾಥ್, ಎಚ್ಡಿಕೆ ಭೇಟಿ

Share It

ತುಮಕೂರು : ಕೇಂದ್ರ ಸಚಿವರಾದ ಎಚ್ ಡಿ ಕುಮಾರಸ್ವಾಮಿ, ನೂತನ ಕೇಂದ್ರ ಸಚಿವರಾದ ಡಾ. ಮಂಜುನಾಥ್, ಜಿಟಿ ದೇವೇಗೌಡ, ಹಾಗೂ ಡಿ ನಾಗರಾಜಯ್ಯ ಅವರು ತುಮಕೂರಿನ ಸಿದ್ದಗಂಗಾ ಮಠಕ್ಕೆ ಇಂದು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಇದೇ ಮೊದಲ ಬಾರಿಗೆ ಕೇಂದ್ರ ಸಚಿವರಾದ ಬಳಿಕ ಶಿರಾ ಗೆ ಆಗಮಿಸಿದ ಕುಮಾರಸ್ವಾಮಿ ಶಿರಾದ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಸ್ಫಟಿಕಪುರಿ ಮಹಾಸಂಸ್ಥಾನ ಮಠಕ್ಕೆ ಆಗಮಿಸಿ ಶ್ರೀ. ನಂಜಾವಧೂತ ಸ್ವಾಮೀಜಿಗಳ ಆಶೀರ್ವಾದವನ್ನು ಪಡೆದರು.

ಸಿದ್ದಗಂಗಾ ಮಠದಲ್ಲಿ ಜಿಟಿ ದೇವೇಗಡ ಮಾತನಾಡಿ, ‘ಮುಖ್ಯಮಂತ್ರಿಗಳು ಈ ಮೊದಲು ಪೆಟ್ರೋಲ್ ಡೀಸೆಲ್ ಬೆಲೆ ಇನ್ನು ಹೆಚ್ಚು ಮಾಡಬಾರದು ಎಂದು ಪ್ರತಿಭಟನೆ ನಡೆಸಿದ್ದರು. ಈಗ ನಮ್ಮದೇ ರಾಜ್ಯದಲ್ಲಿ ಬೇರೆ ಎಲ್ಲ ರಾಜ್ಯಗಳಿಗಿಂತ ಹೆಚ್ಚು ದರ ಇದೆ ಎಂದು ಹೇಳುತ್ತಿದ್ದಾರೆ. ಅಭಿವೃದ್ಧಿಗೆ ಹಣದ ಕೊರತೆ ಇದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಇಲ್ಲ ಆದ್ದರಿಂದ ಬೆಲೆ ಏರಿಕೆಯ ಮಾಡಿದ್ದೀವಿ ಎನ್ನುತ್ತಾರೆ ಎಂಬಿ ಪಾಟೀಲ್’ ಎಂದು ಹೇಳಿದರು.

‘ಚುನಾವಣೆ ಮುಕ್ತಾಯಗೊಂಡ ತಕ್ಷಣ ಹೀಗೆ ಮಾಡುತ್ತಾರೆ ಎಂದು ಅಂದುಕೊಂಡಿರಲಿಲ್ಲ. ಕೂಡಲೇ ಎದೆ ಏರಿಕೆಯನ್ನು ರದ್ದುಪಡಿಸಿ. ಬಡವರ ಸರ್ಕಾರ ಅಂತ ಪದೇ ಪದೇ ಹೇಳುತ್ತೀರಾ. ಈ ಕೂಡಲೇ ಬೆಲೆ ಏರಿಕೆಯನ್ನು ರದ್ದುಪಡಿಸಿ ‘ಎಂದರು.

ಈವಿಎಂ ಮಷೀನ್ ಹ್ಯಾಕ್ ಗೆ ಪ್ರತಿಕ್ರಿಯೆ

‘ಈ ಚುನಾವಣೆಯನ್ನು ಇಡೀ ದೇಶವೇ ಒಪ್ಪಿದೆ. ಎಲ್ಲವನ್ನು ಪರೀಕ್ಷಿಸಿದ ಮೇಲೆಯೇ ಚುನಾವಣೆ ನಡೆದದ್ದು. ಈವಿಎಂ ನಲ್ಲಿ ಯಾವುದೇ ದೋಷವಿಲ್ಲ. ಕೇಂದ್ರ ಸರ್ಕಾರವನ್ನು ಘೋಷಿಸುವ ಅವಶ್ಯಕತೆಯೂ ಇಲ್ಲ. ನಮಗೆ ಅಧಿಕಾರ ಸಿಗಲಿಲ್ಲ ಅಂತ ಹೀಗೆ ಹೇಳ್ತಾರೆ.’ ಎಂದು ಹೇಳಿದರು.


Share It

You cannot copy content of this page