ಬೆಂಗಳೂರು: ಮೈಕ್ರೋಸಾಫ್ಟ್ ಕಂಪನಿ ಕ್ಲೌಡ್ ನಲ್ಲಿ ತಾತ್ಕಾಲಿಕ ಸಮಸ್ಯೆಯುಂಟಾಗಿದ್ದು, ಅನೇಕ ಆನ್ ಲೈನ್ ಸೇವೆಗಳಲ್ಲಿ ವ್ಯತ್ಯಯವಾಗಿದೆ.
ಪ್ರಮುಖವಾಗಿ ಏರ್ ಪೋರ್ಟ್ ನಲ್ಲಿ ವಿಮಾನಗಳ ಲ್ಯಾಂಡಿಂಗ್, ಬೋರ್ಡಿಂಗ್ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ, ವಿಮಾನಗಳನ್ನು ಲ್ಯಾಂಡ್ ಮಾಡಲು ಪರದಾಟ ನಡೆಸಲಾಗುತ್ತಿದೆ. ಬೋರ್ಡಿಂಗ್ ಪಾಸ್ ಗಳನ್ನು ಮ್ಯಾನುವಲ್ ನಲ್ಲಿ ನೀಡಲಾಗುತ್ತಿದೆ.
ಈ ಸಂಬಂಧ ಅನೇಕ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರ ಕ್ಷಮೆ ಕೋರಿವೆ. ಷೇರು ಮಾರುಕಟ್ಟೆಗೂ ಕ್ಲೌಡ್ ಸಮಸ್ಯೆ ಕಾಣಿಸಿಕೊಂಡಿದ್ದು, ಭಾರತೀಯ ಷೇರು ಮಾರುಕಟ್ಟೆ ಕುಸಿತ ಕಾಣಿಸಿಕೊಂಡಿದೆ. ಸೆನ್ಸೆಕ್ಸ್ 400 ಪಾಯಿಂಟ್ ಕುಸಿತ ಕಂಡಿದೆ.
ಮೈಕ್ರೋಸಾಫ್ಟ್ ಸಂಸ್ಥೆ ಕೂಡ ಕ್ಲೌಡ್ ನಲ್ಲಿ ಉಂಟಾಗಿರುವ ತಾತ್ಕಾಲಿಕ ಸಮಸ್ಯೆಯನ್ನು ಸರಿಪಡಿಸುವ ಕುರಿತು ಟ್ವೀಟ್ ಮಾಡಿದೆ. ಸೇವೆಗಳನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ ಎಂದು ಸಂಸ್ಥೆ ತಿಳಿಸಿದೆ.